ಬೆಂಗಳೂರು:– ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಪಿಜಿಗಳದ್ದೇ ಕಾರುಬಾರು. ಯುವಕ ಯುವತಿಯರು ವಾಸ್ತವ್ಯ ಹೂಡುತ್ತಾರೆ. ಇದೀಗ ಪೊಲೀಸ್ ಇಲಾಖೆ ಸುರಕ್ಷತೆ ಮತ್ತು ಭದ್ರತೆ ಸಲುವಾಗಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಪಿಜಿಗಳಿಗೆ ಅಪರಿಚಿತ ವ್ಯಕ್ತಿಗಳ ಎಂಟ್ರಿ, ಕಳ್ಳತನ, ಕಿರುಕುಳ ಸೇರಿದಂತೆ ಅಕ್ರಮ ಚಟುವಟಿಕೆಗಳ ನಿಯಂತ್ರಣ ಮಾಡಲು 10 ಅಂಶಗಳ ಮಾರ್ಗಸೂಚಿ ಹೊರಡಿಸಲಾಗಿದೆ.
ಪೇಯಿಂಗ್ ಗೆಸ್ಟ್’ ಮಾರ್ಗಸೂಚಿ
ಪಿಜಿ ಆರಂಭಿಸಲು ಬಿಬಿಎಂಪಿ ಪರವಾನಗಿ ಕಡ್ಡಾಯ
ಪಿಜಿ ವಾಸಕ್ಕೆ ಬರುವ ಎಲ್ಲರ ಗುರುತಿನ ಚೀಟಿ ಸಂಗ್ರಹ ಮಾಡ್ಬೇಕು
ಸಿಸಿಟಿವಿ, ಅಗ್ನಿ ಸುರಕ್ಷತಾ ವ್ಯವಸ್ಥೆ ಹೊಂದಿರಬೇಕು
ಮಾದಕ ವಸ್ತು ಸೇವನೆ, ಕಾನೂನು ಬಾಹಿರ ಚಟುವಟಿಕೆಗೆ ನಿರ್ಬಂಧ ಮಾಡಬೇಕು
ಪೊಲೀಸ್ ಪರೀಕ್ಷೆ ಬಳಿಕ ಆಡುಗೆ ಕೆಲಸ, ಸೆಕ್ಯೂರಿಟಿ ಗಾರ್ಡ್ ನೇಮಕ
ವಿದೇಶಿ ಪ್ರಜೆಗಳ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು
ವಾಸಕ್ಕೆ ಇದ್ದವರನ್ನ ಬಿಟ್ಟು ತಾತ್ಕಾಲಿಕ ವಾಸ ಕಲ್ಪಿಸಬಾರದು
ರಾತ್ರಿ 10 ರಿಂದ ಬೆಳಗ್ಗೆ 6 ವರೆಗೆ ಧ್ವನಿವರ್ಧಕ ಬಳಸುವಂತಿಲ್ಲ
ಸ್ಥಳೀಯ ಠಾಣೆ, ತುರ್ತು ಕರೆ 112, 103, 1930 ಸಂಖ್ಯೆ ಪ್ರದರ್ಶನ ಮಾಡ್ಬೇಕು
ಪ್ರಥಮ ಚಿಕೆತ್ಸೆ ಸಲಕರಣೆಗಳನ್ನು ಪಿಜಿಯಲ್ಲಿ ಇಟ್ಟುಕೊಳ್ಳಬೇಕು
ಒಂದು ವೇಳೆ ಸುರಕ್ಷತಾ ಕ್ರಮ, ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ, ಅಹಿತಕರ ಘಟನೆ ಸಂಭವಿಸಿದಾಗ ಪಿ.ಜಿ ಮಾಲೀಕರು ಅಥವಾ ವ್ಯವಸ್ಥಾಪಕರೇ ನೇರ ಹೊಣೆ.
ಹೀಗೆ ಸುಮಾರು ಹತ್ತಕ್ಕೂ ಹೆಚ್ಚು ಅಂಶಗಳ ಮಾರ್ಗಸೂಚಿಯನ್ನ ಪೊಲೀಸ್ ಇಲಾಖೆ ಹೊರಡಿಸಿದೆ. ಪಿಜಿ ಅಸೋಸಿಯೇಷನ್ ಸಂಘ ಸ್ವಾಗತಿಸಿದೆ. ಈಗಗಾಲೇ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದೆ ಎಂದು ಅಸೋಸಿಯೇಷನ್ ಆಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ