ಬೆಂಗಳೂರು: ಸಿಲಿಕಾನ್ ಸಿಟಿ ಜನರ ನಾಡಿಮಿಡಿತವಾಗಿರೋದು ನಮ್ಮ ಮೆಟ್ರೋ . ಸುರಕ್ಷಿತ ಪ್ರಯಾಣದೊಂದಿಗೆ ಸಮಯ ಕೂಡ ಉಳಿತಾಯವಾಗುತ್ತೆ. ಟ್ರಾಫಿಕ್ ಸಮಸ್ಯೆಯಂತೂ ಇಲ್ಲವೇ ಇಲ್ಲ. ಅದಕ್ಕಾಗಿ ಮೆಟ್ರೋ ಕಡೆ ಮುಖ ಮಾಡಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜನರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ಬಿಎಂಆರ್ಸಿಎಲ್ ಮುಂದಾಗಿದೆ.
ಸದ್ಯ ನಮ್ಮ ಮೆಟ್ರೋ ಈಗಾಗಲೇ ಕ್ಯೂಆರ್ ಕೋಡ್ ವ್ಯವಸ್ಥೆಯನ್ನ ಹೊಂದಿದೆ. ಆದ್ರೆ ಈಗಿರುವ ಕ್ಯೂಆರ್ ಕೋಡ್ ಎಲ್ಲ ಆ್ಯಪ್ಗಳಿಗೂ ಸಹಕರಿಸಲ್ಲ. ಪೇಟಿಎಂ, ವಾಟ್ಸಪ್, ಯಾತ್ರಾ ಆ್ಯಪ್ಗಳಿಗೆ ಮಾತ್ರ ಕ್ಯೂಆರ್ ಕೋಡ್ ಸೌಲಭ್ಯವಿದೆ. ಇದನ್ನ ಯುನಿವರ್ಸೆಲ್ ವೇದಿಕೆಗೆ ತರಲು ಬಿಎಂಆರ್ಸಿಎಲ್ ನಿರ್ಧರಿಸಿದ್ದು, ಹೊಸ ಆ್ಯಪ್ ವ್ಯವಸ್ಥೆಯನ್ನ ಅನುಷ್ಠಾನಗೊಳಿಸಿದೆ.