ಬೆಂಗಳೂರು:- ಕರುನಾಡಿನ ಗ್ಯಾರಂಟಿ ಸ್ಕೀಮ್ ಈಗ ಬೇರೆ ರಾಜ್ಯದಲ್ಲಿಯೂ ಹವಾ ಎಬ್ಬಿಸಿದಂತೆ ಕಾಣಿಸುತ್ತಿದೆ. ಕರ್ನಾಟಕದ ಗೃಹಜ್ಯೋತಿ ಬಗ್ಗೆ ಅಧ್ಯಯನ ಮಾಹಿತಿ ಪಡೆಯಲು ಈಗ ತೆಲಂಗಾಣ ಸರ್ಕಾರ ಉತ್ಸಾಹ ತೋರುತ್ತಿದೆ.
ಕರ್ನಾಟಕದ ಗೃಹಜ್ಯೋತಿಗೆ ತೆಲಂಗಾಣ ಫಿದಾ ಆಗಿದೆ. ಕರುನಾಡಿನ ಗ್ಯಾರಂಟಿ ಈಗ ಬೇರೆ ರಾಜ್ಯದಲ್ಲಿಯೂ ಸಹ ಹವಾ ಎಬ್ಬಿಸಿದೆ. ಗೃಹಜ್ಯೋತಿ ಯಶಸ್ವಿ ಜಾರಿ ಬೆನ್ನಲ್ಲೇ ನೆರೆಯ ರಾಜ್ಯ ತೆಲಂಗಾಣದ ವಿದ್ಯುತ್ ವಿತರಣಾ ಕಂಪನಿ ಬೆಂಗಳೂರಿನ ಬೆಸ್ಕಾಂ ಕಚೇರಿಗೆ ಭೇಟಿ ನೀಡಿದೆ. ಗೃಹಜ್ಯೋತಿ ಸ್ಕೀಮ್ನ ಅನುಷ್ಟಾನ, ರಿಯಾಯಿತಿ ಹಾಗೂ ವಿದ್ಯುತ್ ಬಿಲ್ ಎಲ್ಲದರ ಬಗ್ಗೆಯೂ ಅಧಿಕಾರಿಗಳು ಸಮಗ್ರ ಚರ್ಚೆ ನಡೆಸಿದ್ದಾರೆ., ಬೆಸ್ಕಾಂನ ಎಂಡಿ, ಬೆಸ್ಕಾಂ ಹಣಕಾಸು ವಿಭಾಗ ಮತ್ತು ಐಟಿ ಕಂದಾಯ ವಿಭಾಗದ ಜೊತೆ ತೆಲಂಗಾಣದ ವಿದ್ಯುತ್ ವಿತರಣ ಕಂಪನಿಯ ನಿರ್ದೇಶಕರು ಹಾಗೂ ಐಟಿ ವಿಭಾಗದವರು ಚರ್ಚೆ ನಡೆಸಿ ಅವರ ರಾಜ್ಯದಲೂ ಈ ಯೋಜನೆ ಜಾರಿಗೆ ತರುವ ಬಗ್ಗೆ ಉತ್ಸಾಹ ತೋರಿದ್ದಾರೆ. ತೆಲಂಗಾಣದಲ್ಲಿಯೂ ಕರ್ನಾಟಕದ ಗೃಹಜ್ಯೋತಿ ಸ್ಕೀಮ್ ಜಾರಿ ತರುವುದಾಗಿ ಹೇಳಿದ್ದಾರೆ
ರಾಜ್ಯದ ಗ್ಯಾರಂಟಿ ಅಲೆಯಲ್ಲಿ ಕಾಂಗ್ರೆಸ್ ತೆಲಂಗಾಣದಲ್ಲಿಯೂ ಕಮಾಲ್ ಮಾಡಿತ್ತು. ಹೀಗಾಗಿ ಗ್ಯಾರಂಟಿ ಹಿಂದೆ ಬಿದ್ದಿರುವ ತೆಲಂಗಾಣ ಸರ್ಕಾರ ಕರ್ನಾಟಕದ ಗ್ಯಾರಂಟಿ ಸ್ಕೀಮ್ಗಳ ಯಥಾವತ್ ಜಾರಿಗೆ ಸರ್ಕಸ್ ಮಾಡುತ್ತಿದೆ.