ಹೈದರಾಬಾದ್: ಎಂಟು ವರ್ಷಗಳ ಹಿಂದೆ 52 ವರ್ಷದ ತಂದೆ ತನ್ನ 19 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಈಗ ಕಾಮುಕ ಅಪ್ಪ ಪುಂಜಗುಟ್ಟ ಪೊಲೀಸರ ಅಥಿತಿಯಾಗಿದ್ದಾನೆ. ಆರೋಪಿಯನ್ನು ಮೊಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದೆ. ಬಿಎಸ್ ಮಖ್ತಾದಲ್ಲಿ ನೆಲೆಸಿದ್ದು, ನಾಮ್ಪಲ್ಲಿಯಲ್ಲಿ ಡಿಟಿಪಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು ಎಂದು ಪೋಲಿಸರು ತಿಳಿಸಿದರು.
8 ವರ್ಷಗಳ ಹಿಂದೆ ನಡೆದಿದ್ದೇನು?
ತಾಯಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಕಾಮುಕ ಅಪ್ಪ 19 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದನು. ನಂತರ ತಾಯಿಗೆ ವಿಚಾರ ತಿಳಿಸಿದ್ದಾರೆ. ಆದರೆ ತಾಯಿ ಯಾರಿಗೂ ಹೇಳಬೇಡ ಎಂದು ಭಾಷೆ ತೆಗೆದುಕೊಂಡಿದ್ದಳು. ಈ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ಮತ್ತೆ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.
ಸಂತ್ರಸ್ತೆ ತಂದೆಯ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಯುವತಿ ಕೊನೆಗೆ ಮನೆ ಬಿಟ್ಟು ಹೋಗಿದ್ದರು. ಒಂದು ಖಾಸಗಿ ಹಾಸ್ಟೆಲ್ನಲ್ಲಿ ಉಳಿದುಕೊಂಡು, ಖಾಸಗಿ ಸಂಸ್ಥೆಯಲ್ಲಿ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ
ಎಂಟು ವರ್ಷದ ಬಳಿಕ ಸಂತ್ರಸ್ತೆ ಪೋಷಕರನ್ನು ಭೇಟಿ ಮಾಡಲು ಮತ್ತೆ ಮನೆಗೆ ಬಂದಿದ್ದಾರೆ. ಆದರೆ ಕಾಮುಕ ಅಪ್ಪ ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಲು ಯತ್ನಿಸಿದ್ದು, ಕೊನೆಗೆ ಸಂತ್ರಸ್ತೆ ಕಾಮುಕ ಅಪ್ಪನ ವಿರುದ್ಧ ದೂರು ದಾಖಲಿಸಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪುಂಜಗುಟ್ಟ ಠಾಣೆಯ ಇನ್ಸ್ ಪೆಕ್ಟರ್ ಎಸ್. ರವೀಂದರ್ ತಿಳಿಸಿದ್ದಾರೆ.