ಲಂಡನ್: ಮುಂಜಾನೆ ಬೇಗ ಎದ್ದು ವೇಗದ ನಡಿಗೆ ಅಥವಾ ಬ್ರಿಸ್ಕ್ ವಾಕ್ ಮಾಡಿದರೆ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ಬಹುತೇಕ ಮಂದಿ ಮುಂಜಾನೆ ವಾಕ್ ಗೆ ತೆರಳುತ್ತಾರೆ. ಇದರಲ್ಲಿ ಕೆಲವರು ವೇಗವಾಗಿ ನಡೆಯುತ್ತಾರೆ. ಇನ್ನು ಕೆಲವರು ನಿಧಾನವಾಗಿ ನಡೆಯುತ್ತಾರೆ. ಇದನ್ನೆಲ್ಲಾ ನಾವು ನೋಡಿರುತ್ತೇವೆ. ಆದ್ರೆ ಈ ದೇಶದಲ್ಲಿ ವಾಕಿಂಗ್ ಮಾಡಿದರೆ ವಿದ್ಯುಚ್ಛಕ್ತಿಯನ್ನೂ ಉತ್ಪಾದಿಸಬಹುದು ಎಂದು ಪ್ರಯೋಗದ ಮೂಲಕ ತಿಳಿಸಿಕೊಟ್ಟಿದೆ.
ಹೌದು ಇಂಗ್ಲೆಂಡ್ನ ಶ್ರಾಪ್ಶೈರ್ನಲ್ಲಿರುವ ಪಾದಚಾರಿ ಮಾರ್ಗದಲ್ಲಿ ಈ ಪ್ರಯೋಗ ಮಾಡಲಾಗಿದೆ. ಇಲ್ಲಿಯ ಫುಟ್ಪಾಥ್ ಮೇಲೆ ನೀವು ನಡೆಯುವಾಗ ನಿಮ್ಮ ಶಕ್ತಿಯು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿತವಾಗುತ್ತದೆ. ಇಂಥದ್ದೊಂದು ಮ್ಯಾಜಿಕ್ ಇಲ್ಲಿ ಮಾಡಲಾಗಿದೆ. ಈ ಫುಟ್ಪಾತ್ನಲ್ಲಿ ಜನರು ನಡೆದಾಡುವಾಗ ಶಕ್ತಿಯು ಉತ್ಪತ್ತಿಯಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಟೆಲ್ಫೋರ್ಡ್ ಮತ್ತು ವ್ರೆಕಿನ್ ಕೌನ್ಸಿಲ್ ಟೆಲ್ಫೋರ್ಡ್ ರೈಲು ನಿಲ್ದಾಣದಿಂದ ಪಟ್ಟಣಕ್ಕೆ ಹೋಗುವ ಕಾಲ್ನಡಿಗೆಯಲ್ಲಿ ಸಿಲ್ವರ್ ಸ್ವಾಲೋ ಫುಟ್ಬ್ರಿಡ್ಜ್ ಜೊತೆಗೆ ಪಾದಚಾರಿ ಮಾರ್ಗವನ್ನು ಸ್ಥಾಪಿಸಿದೆ, ಇದು ಪಾದಚಾರಿಗಳ ಹೆಜ್ಜೆಗಳ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಮತ್ತು ಅದನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸುತ್ತದೆ.
ಈ 6-ಮೀಟರ್ ಉದ್ದದ ಸ್ಮಾರ್ಟ್ ಫುಟ್ಪಾತ್ಗಾಗಿ ಟೆಲ್ಫೋರ್ಡ್ ಮತ್ತು ರೆಕಿನ್ ಕೌನ್ಸಿಲ್ ಬಳಸಿದ ತಂತ್ರಜ್ಞಾನದಿಂದ ಮೊಬೈಲ್ ಫೋನ್ಗಳು ಅಥವಾ ಇತರ ಸಾಧನಗಳನ್ನು ಚಾರ್ಜ್ ಮಾಡಬಹುದಾಗಿದೆ. ಪಾದಚಾರಿಗಳು ತಾವು ಎಷ್ಟು ವಿದ್ಯುತ್ ಉತ್ಪಾದಿಸಿದ್ದೇವೆ ಎಂದು ತಿಳಿಯಲು ಬಯಸಿದರೆ, ಅವರು ಟೆಡ್ಫೋರ್ಡ್ ಸೆಂಟ್ರಲ್ ಸ್ಟೇಷನ್ನಲ್ಲಿರುವ ಸೌರಶಕ್ತಿ ಚಾಲಿತ ಪರದೆಗಳನ್ನು ನೋಡಬಹುದು.