ರಾಜ್ಯದಲ್ಲಿ ಮಂಗನ ಖಾಯಿಲೆ ಸೋಂಕು ಪ್ರಕರಣ ಹೆಚ್ಚಾಗಿದ್ದು, ನಿನ್ನೆ ಒಂದೇ ದಿನದಲ್ಲಿ ೧೧ ಜನರಿಗೆ ಪಾಸಿಟಿವ್ ವರದಿ ಬಂದಿದೆ.
ನಿನ್ನೆ ಒಟ್ಟು ೧೮ ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ರಾಜ್ಯದಲ್ಲಿ ಕೆಎಫ್ ಡಿ ಬಾಧಿತರ ಸಂಖ್ಯೆ ಒಟ್ಟು ೬೪ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿ ಒಟ್ಟು ೩೭ ಸಕ್ರಿಯ ಪ್ರಕರಣಗಳು ವರದಿ ಇದ್ದು, ತೀರ್ಥಹಳ್ಳಿಯಲ್ಲಿ ೩, ಹೊಸನಗರದಲ್ಲಿ ೮ ಜನರಲ್ಲಿ ಕೆಎಫ್ ಡಿ ಸೋಂಕು ದೃಢವಾಗಿದೆ.
ಪಾಸಿಟಿವ್ ಇರುವ ಸೋಂಕಿತರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.