ಉತ್ತರ ಪ್ರದೇಶ ::- ಇಲ್ಲಿನ ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಜಗನ್ನಾಥಪುರ ಗ್ರಾಮದ ಬಳಿ ಚರಂಡಿಗೆ ಸ್ವಿಫ್ಟ್ ಕಾರು ಉರುಳಿ ಬಿದ್ದ ಹಿನ್ನೆಲೆ 6 ಮಂದಿ ಧಾರುಣ ಸಾವನ್ನಪ್ಪಿದ್ದಾರೆ.
ಬಲಿಯಾದ ಆರು ಮಂದಿಯನ್ನು ದೇರಾಪುರ ಮತ್ತು ಶಿವರಾಜಪುರ ನಿವಾಸಿಗಳು ಎಂದು ಗುರುತಿಸಲಾಗಿದೆ.
ವಾಹನದಲ್ಲಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ತಿಲಕ ಸಮಾರಂಭಕ್ಕೆ (ಮದುವೆಗೆ ಸಂಬಂಧಿಸಿದ) ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಪಲ್ಟಿಯಾಗಿ ಅಪಘಾತ ಸಂಭವಿಸಿದೆ.