ಬಿಗ್ ಬಾಸ್ ಮನೆಯ ಸಂತು ಪಂತು ಎಂದೇ ಫೇಮಸ್ ಆಗಿದ್ದ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತುದೊಡ್ಮನೆಯಿಂದ ಆಚೆ ಬಂದ ನಂತರವೂ ತಮ್ಮ ಸ್ನೇಹವನ್ನು ಮುಂದುವರೆಸಿದ್ದಾರೆ. ನಿನ್ನೆಯಷ್ಟೇ ತಮ್ಮೊಂದಿಗೆ ಬಿಗ್ ಬಾಸ್ ಮನೆಯೊಳಗಿದ್ದ ಎಲ್ಲ ಕಂಟೆಸ್ಟೆಂಟ್ ಗಳನ್ನೂ ವರ್ತೂರು ತಮ್ಮೂರಿಗೆ ಕರೆಯಿಸಿಕೊಂಡು ಸತ್ಕರಿಸಿದ್ದಾರೆ.
ಅದರಲ್ಲೂ ತನ್ನ ನೆಚ್ಚಿನ ಸ್ನೇಹಿತ ತುಕಾಲಿ ಸಂತುಗೆ ಚಿನ್ನದಲ್ಲಿ ಮಾಡಿಸಿರುವ ಸಂತು-ಪಂತು ಹೆಸರಿನ ಲಾಕೆಟ್ ನೀಡಿದ್ದಾರೆ. ತಮ್ಮಿಬ್ಬರ ಸ್ನೇಹ ಶಾಶ್ವತವಾಗಿರಲಿ ಎನ್ನುವ ಕಾರಣಕ್ಕಾಗಿ ಈ ಪದಕವನ್ನು ನೀಡಿರುವುದಾಗಿ ವರ್ತೂರು ಹೇಳಿಕೊಂಡಿದ್ದಾರೆ. ಅದನ್ನು ಭಾವುಕವಾಗಿಯೇ ಸಂತು ಧರಿಸಿದ್ದಾರೆ.