2024ರ ದಕ್ಷಿಣ ಭಾರತದ ಗೋಲ್ಡನ್ ಫೇಸ್ ಪೇಜೆಂಟ್ ಕಾರ್ಯಕ್ರಮ ಇತ್ತೀಚೆಗಷ್ಟೇ ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಡೆದಿದೆ. ಆಸಿಡ್ ದಾಳಿಯ ಸಂತ್ರಸ್ತರಿಗೆ ಚರ್ಮದಾನದ ಬಗ್ಗೆ ಜಾಗೃತಿ ಮೂಡಿಸುವ ಗುರಿಯೊಂದಿಗೆ, ವಿಂಡೋ ಎಂಟರ್ಟೈನ್ಮೆಂಟ್ಗಳ ಸಂಸ್ಥಾಪಕರಾದ ಗೋಪಿನಾಥ್ ರವಿ ಮತ್ತು ಸರವಣನ್, ಎಸಿಟಿಸಿ ಸ್ಟುಡಿಯೋ ಸಂಸ್ಥಾಪಕ ಮತ್ತು ಸಿಇಒ ಹೇಮಂತ್ ಪ್ರಾರಂಭಿಸಿದ್ದಾರೆ.
ಕಾರ್ಯಕ್ರಮಕ್ಕೆ ಖ್ಯಾತ ನಟಿ ಆಮಿ ಜಾಕ್ಸನ್ ಮುಖ್ಯ ಅತಿಥಿ ಭಾಗಿಯಾಗಿದ್ದು, ವಿವಿಧ ಭಾಗಗಳಲ್ಲಿ ಆಯ್ಕೆಯಾದ ಗೋಲ್ಡ್ ಪೇಸ್ ಸೌತ್ ಇಂಡಿಯಾ ಕಿರೀಟವನ್ನು ದಕ್ಷಿಣ ಭಾರತದ ಖ್ಯಾತ ನಟಿ ಶ್ರೇಯಾ ಶರಣ್ ಸ್ಪರ್ಧಿಗಳಿಗೆ ಅಲಂಕರಿಸಿದ್ರು. ವಿಂಡೋ ಎಂಟರ್ಟೈನ್ಮೆಂಟ್ನ ಬ್ರಾಂಡ್ ಅಂಬಾಸಿಡರ್ ಪಾರ್ವತಿ ನಾಯರ್ ಕಾರ್ಯಕ್ರಮಕ್ಕೆ ಸಾಥ್ ಕೊಟ್ಟರು.
ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಕೇರಳದ ನಾಲ್ಕು ರಾಜ್ಯಗಳಿಂದ 1000 ಕ್ಕೂ ಸ್ಪರ್ಧಿಗಳು ಈ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿದ್ದರು. 1000 ಸ್ಪರ್ಧಿಗಳಲ್ಲಿ ಅಳೆದು ತೂಗಿ 51 ಕಂಟೆಸ್ಟೆಂಟ್ ಸ್ಪರ್ಧಿಸುವ ಅವಕಾಶ ನೀಡಲಾಯಿತು. ಈ ಪೈಕಿ ಗೋಲ್ಡನ್ ಪೇಸ್ ಆಫ್ ಬೆಂಗಳೂರು ಕಿರೀಟವನ್ನು ಸಾಯಿಪ್ರಿಯಾ ತಮ್ಮದಾಗಿಸಿಕೊಂಡರು.