ಒಹಿಯೊ: ಭಾರತೀಯ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಯ ಶವ ಇಲ್ಲಿನ ಕ್ರೋವ್ಸ್ ಗ್ರೋ ಪ್ರಕೃತಿ ಸಂರಕ್ಷಣಾಧಾಮವೊಂದರಲ್ಲಿ ಪತ್ತೆಯಾಗಿದೆ.
ಸಮೀರ್ ಕಾಮತ್ ಮೃತ ವಿದ್ಯಾರ್ಥಿ. ಅಮೆರಿಕದ ಪೌರತ್ವ ಪಡೆದಿದ್ದ ಸಮೀರ್ ಕಾಮತ್ ಕಳೆದ ವರ್ಷ ಆಗಸ್ಟ್ ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು. ಬಳಿಕ ಅಲ್ಲಿಯೇ ಡಾಕ್ಟರೇಟ್ ಅಧ್ಯಯನ ನಡೆಸುತ್ತಿದ್ದರು ಎಂದು ವಾರೆನ್ಕೌಂಟಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪರ್ಡ್ಯೂ ವಿವಿಯ ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿಗಳಲ್ಲಿ ಕಾಮತ್ ಎರಡನೆಯವರಾಗಿದ್ದಾರೆ. ಕಳೆದ ವಾರ ನೀಲ್ ಆಚಾರ್ಯ ಎಂಬ ಪರ್ಡ್ಯೂ ವಿವಿಯ ಭಾರತೀಯ ಮೂಲದ ವಿದ್ಯಾರ್ಥಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.