ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರು ದೇವಾಲಯಗಳಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಹೀಗಾಗಿ, ದೇವಾಲಯಗಳ ಖಜಾನೆಯೂ ತುಂಬಿ ತುಳುಕುತಿದೆ.
2022ರಲ್ಲಿ ದೇಗುಲಗಳಿಂದ ಸರ್ಕಾರಕ್ಕೆ 230 ಕೋಟಿ ಆದಾಯ ಬಂದಿತ್ತು. ಇದೀಗ, 2023ರಲ್ಲಿ 390 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 150 ಕೋಟಿ ರೂಪಾಯಿ ಆದಾಯ ಹೆಚ್ಚಳವಾಗಿದೆ. ಹಾಗಾದರೆ, ಯಾವೆಲ್ಲಾ ದೇವಾಲಯಗಳಲ್ಲಿ ಎಷ್ಟು ಆದಾಯ ಬಂದಿದೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
- ಕುಕ್ಕೆ ಸುಬ್ರಮ್ಮಣ್ಯ
ಕಳೆದ ವರ್ಷದ ಆದಾಯ : 74 ಕೋಟಿ
ಈ ವರ್ಷದ ಆದಾಯ : 123 ಕೋಟಿ
- ಕೊಲ್ಲೂರು ಮೂಕಂಬಿಕಾ
ಕಳೆದ ವರ್ಷದ ಆದಾಯ : 31.36 ಕೋಟಿ
ಈ ವರ್ಷದ ಆದಾಯ : 59.47 ಕೋಟಿ
- ಚಾಮುಂಡೇಶ್ವರಿ ದೇಗುಲ
ಕಳೆದ ವರ್ಷದ ಆದಾಯ : 21.92 ಕೋಟಿ
ಈ ವರ್ಷದ ಆದಾಯ : 52.40 ಕೋಟಿ
- ಎಡೆಯೂರು ಸಿದ್ದಲಿಂಗೇಶ್ವರ
ಕಳೆದ ವರ್ಷದ ಆದಾಯ : 31.74 ಕೋಟಿ
ಈ ವರ್ಷದ ಆದಾಯ : 36.48 ಕೋಟಿ
- ಕಟೀಲು ದುರ್ಗಾಪರಮೇಶ್ವರಿ
ಕಳೆದ ವರ್ಷದ ಆದಾಯ : 19.57 ಕೋಟಿ
ಈ ವರ್ಷದ ಆದಾಯ : 32.10 ಕೋಟಿ
- ನಂಜನಗೂಡು ಶ್ರೀಕಂಠೇಶ್ವರ
ಕಳೆದ ವರ್ಷದ ಆದಾಯ : 18.49 ಕೋಟಿ
ಈ ವರ್ಷದ ಆದಾಯ : 26.71 ಕೋಟಿ
- ಸವದತ್ತಿ ಯಲಮ್ಮ
ಕಳೆದ ವರ್ಷದ ಆದಾಯ : 10.99 ಕೋಟಿ
ಈ ವರ್ಷದ ಆದಾಯ : 22.52 ಕೋಟಿ
- ಮಂದಾರ್ತಿ ದುರ್ಗಾಪರಮೇಶ್ವರಿ
ಕಳೆದ ವರ್ಷದ ಆದಾಯ : 31.36 ಕೋಟಿ
ಈ ವರ್ಷದ ಆದಾಯ : 59.47 ಕೋಟಿ
- ಘಾಟಿ ಸುಬ್ರಹ್ಮಣ್ಯ
ಕಳೆದ ವರ್ಷದ ಆದಾಯ : 7.89 ಕೋಟಿ
ಈ ವರ್ಷದ ಆದಾಯ : 12.25 ಕೋಟಿ
- ಬೆಂಗಳೂರು ಬನಶಂಕರಿ ದೇವಾಲಯ
ಕಳೆದ ವರ್ಷದ ಆದಾಯ : 5.95 ಕೋಟಿ
ಈ ವರ್ಷದ ಆದಾಯ : 10.58 ಕೋಟಿ
ಒಟ್ನಲ್ಲಿ, ಶಕ್ತಿ ಯೋಜನೆಯು ನಿಜವಾಗಿಯೂ ದೇವಾಲಯಗಳಿಗೆ ಶಕ್ತಿ ತುಂಬಿದ್ದು, ರಾಜ್ಯದ ಪ್ರಮುಖ ದೇವಾಲಯಗಳ ಖಜಾನೆ ಭರ್ತಿಯಾಗುತಿರುವುದಂತು ಸುಳ್ಳಲ್ಲ.