ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ‘ಕಡೈಸಿ ವಿವಸಾಯಿ’ ಚಿತ್ರದಲ್ಲಿ ನಟಿಸಿದ್ದ ಕಾಸಮ್ಮಲ್ (71) ಅವರು ತಮ್ಮ ಸ್ವಂತ ಮಗನಿಂದಲೇ ಹತ್ಯೆಯಾಗಿದ್ದಾರೆ. ಪ್ರಕರಣ ಸಂಬಂಧ ಪುತ್ರ ಪಿ.ನಾಮಕೋಡಿ(52)ಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಮಧುರೈ ಜಿಲ್ಲೆಯ ಉಸಿಲಂಪಟ್ಟಿ ಸಮೀಪದ ಅನೈಯೂರಿನಲ್ಲಿ ಈ ಘಟನೆ ನಡೆದಿದೆ.
ಮದ್ಯ ಖರೀದಿಸಲು ಹಣಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಈ ಗಲಾಟೆ ತಾರಕಕ್ಕೇರಿ ಮಗ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ಕಾಸಮ್ಮಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ವಿಜಯ್ ಸೇತುಪತಿಮತ್ತು 85 ವರ್ಷದ ನಲ್ಲಂದಿ ಅವರು ‘ಕಡೈಸಿ ವಿವಸಾಯಿ’ (ಕೊನೆಯ ರೈತ) ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರವು ಅನೇಕ ಹಳ್ಳಿಗರನ್ನು ಒಳಗೊಂಡಿತ್ತು. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಅವರ ಚಿಕ್ಕಮ್ಮನ ಪಾತ್ರದಲ್ಲಿ ಕಾಸಮ್ಮಲ್ ಅಭಿನಯಿಸಿದ್ದರು. ಕಾಸಮ್ಮಲ್ ಮತ್ತು ಆಕೆಯ ಪತಿ ಬಾಲಸಾಮಿ ಅವರಿಗೆ ನಾಮಕೋಡಿ ಸೇರಿದಂತೆ ಮೂವರು ಮಕ್ಕಳಿದ್ದಾರೆ. ಪತ್ನಿಯ ಜೊತೆ ಜಗಳವಾಡಿದ್ದ ನಾಮಕೋಡಿಯು ತಂದೆ-ತಾಯಿಯೊಂದಿಗೆ ವಾಸವಾಗಿದ್ದನು.