ಬೆಂಗಳೂರು: ಶ್ರೀಕಂಠೇಶ್ವರನಗರದಲ್ಲಿ ಗೃಹಿಣಿ ಪ್ರೇಮಲತಾ ಸಾವು ಪ್ರಕರಣವನ್ನು ಆತ್ಮಹತ್ಯೆ ಎಂದುಕೊಂಡ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಕೊಲೆ ಮಾಡಿಸಿ ಆತ್ಮಹತ್ಯೆ ಎಂದು ಡ್ರಾಮ ಮಾಡಿದ್ದ ಪತಿ ಅಂದರ್ ಆಗಿದ್ದು ಸ್ನೇಹಿತನಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಖತರ್ನಾಕ್ ಪತಿ
ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಇತ್ತು ಅದರ ಮೇಲೆ ಸಾಕಷ್ಟು ಅನುಮಾನ ಇತ್ತು 200 ಸಿಸಿಟಿವಿ ಪರಿಶೀಲಿಸಿ ವಿನಯ್ ಬಂಧನ ಮಾಡಲಾಗಿತ್ತು ವಿನಯ್ ಜೊತೆಗೆ ಪತಿ ಶಿವಶಂಕರ್ ಕೂಡ ಬಂಧನ ಮಾಡಲಾಗಿದೆ
2023 ರಲ್ಲಿ ವಿನಯ್ ಪತ್ನಿ ಕೆರೆಯಲ್ಲಿ ಬಿದ್ದಿದ್ದಾಗಿ ಮಾಹಿತಿ ಇತ್ತು ಆಗ ಆಕಸ್ಮಿಕ ಸಾವು ಅಂತಾ ಹುಣಸಮಾರನಹಳ್ಳಿಯಲ್ಲಿ ಕೇಸ್ ಆಗಿತ್ತು ಆ ಪ್ರಕರಣದ ಅಸಲಿಯತ್ತು ಕೂಡ ಈಗ ಬಯಲಾಗಿದೆ ವಿನಯ್ ಈತನೆ ಕೆರೆಗೆ ತಳ್ಳಿರೋದಾಗಿ ಒಪ್ಪಿಕೊಂಡಿದ್ದಾನೆ
ಶಿವಶಂಕರ್ ಮನೆಯಲ್ಲಿಯೇ ಸಿಸಿಟಿವಿ ಇತ್ತು ಅದನ್ನ ಆಫ್ ಮಾಡಿ ಕೊಲೆ ಮಾಡಿದ್ದಾರೆ ಬ್ಯಾಂಕ್ ನಲ್ಲಿ ಐದು ವರ್ಷದ ಹಿಂದೆ ಇಬ್ಬರು ಪರಿಚಯವಾಗಿದ್ರು ಆರೋಪಿ ಶಿವಶಂಕರ್ ಬಟ್ಟೆ ವ್ಯಾಪಾರಿಯಾಗಿದ್ದಾನೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ