ಗ್ರಾಮಪ್ರತಿನಿಧಿಗಳು ಇಂಧನ ಇಲಾಖೆ ಕದ ತಟ್ಟಿ ಸುಸ್ತಾಗಿದ್ದಾರೆ. ಸದ್ಯ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕಳೆದ 20ವರ್ಷದಿಂದ ಗ್ರಾಮ ಪ್ರತಿನಿಧಿ ಸೇವೆ ಖಾಯಂ ಮಾಡಿಲ್ಲ. 20 ವರ್ಷದಿಂದ ಸೇವೆ ಖಾಯಂ ಮಾಡುವುದಾಗಿ ಈ ಹಿಂದೆ ಮಾಜಿ ಸಿಎಂಎಸ್ ಎಂ ಕೃಷ್ಣ ಭರವಸೆ ನೀಡಿದರು.
ಆದರೆ ಹಲವು ಸರ್ಕಾರಗಳು ಬಂದರೂ ಭರವಸೆ ಮಾತ್ರ ಈಡೇರಿಸಿಲ್ಲ. ಹೀಗಾಗಿ ಇಂಧನ ಇಲಾಖೆ ಸಚಿವ ಕೆ.ಜೆ ಜಾರ್ಜ್ಗ್ ಪತ್ರ ಮೂಲಕ ಮನವಿ ಮಾಡಿದ್ದಾರೆ. ಆದರೆ ಸರಿಯಾದ ಸ್ಪಂದನೆ ಸಿಗದೇ ಇರುವ ಕಾರಣ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.