ಸಂಬಂಧಿಕರ ಸಾವಿನ ಕಾರ್ಯಕ್ಕೆ ಹೋಗ್ತಿದ್ದ ವೃದ್ದೆಯೊಬ್ಬರು ದಾರುಣ ಸಾವು ಕಂಡಿದ್ದಾರೆ. ಸೂರ್ಯ ಉದಯಿಸೋ ವೇಳೆ ರಸ್ತೆ ದಾಟುತ್ತಿದ್ದ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪ್ರಾಣವನ್ನೇ ತೆಗೆದು ಪರಾರಿಯಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದಲ್ಲಿ ಅಂತ ಹೇಳ್ತೀವಿ ನೋಡಿ.. ಈ ಫೋಟೋದಲ್ಲಿರುವ ವೃದ್ಧೆ ಹೆಸರು ಆಶಾರಾಣಿ.. ವಯಸ್ಸು ೬೦ ದಾಟಿತ್ತು. ಯಶವಂತಪುರ ಸಮೀಪದ ಮಹಾಲಕ್ಷ್ಮಿ ಲೇಔಟ್ ನಲ್ಲಿ ಕುಟುಂಬ ಸಮೇತ ವಾಸವಾಗಿದ್ರು.
ಆದ್ರೆ ಇಂದು ಬೆಳಿಗ್ಗೆ ಸಂಬಂದಿಕರ ಸಾವಿನ ಕಾರ್ಯಕ್ಕೆ ಹೋಗ್ತಿದ್ದ ಆಶಾರಾಣಿ ಹಿಟ್ ಆ್ಯಂಡ್ ರನ್’ಗೆ ಬಲಿಯಾಗಿದ್ದಾರೆ.. ಹೌದು.. ಮೈಸೂರಿನ ತಿ.ನರಸೀಪುರದಲ್ಲಿ ಆಶಾರಾಣಿಯವರ ಸಂಬಂಂದಿಕರೊಬ್ಬರು ಸಾವನ್ನಪ್ಪಿದ್ರು. ಅವರ ಸಾವಿನ ಕಾರ್ಯಕ್ಕೆ ಹೋಗಲು ಆಶಾರಾಣಿ ಇಂದು ಬೆಳಿಗ್ಗೆ ೫.೩೦ ರ ಸುಮಾರಿಗೆ ಮಹಾಲಕ್ಷ್ಮಿ ಲೇಔಟ್ ಮೆಟ್ರೋ ಸ್ಟೇಷನ್ ಬಳಿ ಬಂದಿದ್ರು.
ಆದ್ರೆ ಮೈಸೂರು ಕಡೆ ಹೋಗುವ ಬಸ್ ಹತ್ತಲು ರಸ್ತೆ ದಾಟುತ್ತಿದ್ದ ಆಶಾರಾಣಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಕೆಳಗೆ ಬಿದ್ದ ಆಶಾರಾಣಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನು ಘಟನೆ ನಡೆದ ತಕ್ಷಣ ಮಲ್ಲೇಶ್ವರಂ ಸಂಚಾರ ವಿಭಾಗ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನ ಆಸ್ಪತ್ರೆಗೆ ಸಾಗಿಸಿದ್ರು.
ಆದ್ರೆ ಆಶಾರಾಣಿ ಅವರಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿರೋ ವಾಹನದ ಗುರುತು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಯಾವ ವೆಹಿಕಲ್ ಈ ಹಿಟ್ ಅಂಡ್ ರನ್ ಮಾಡಿದೆ ಅನ್ನೋದರ ಹುಡುಕಾಟದಲ್ಲಿದ್ದಾರೆ. ಒಟ್ನಲ್ಲಿ ಸಾವಿನ ಕಾರ್ಯಕ್ಕೆ ಹೋಗ್ತಿದ್ದ ಹಿರಿಜೀವ ಈ ರೀತಿ ದುರಂತ ಸಾವು ಕಂಡಿರೋದು ಕುಟುಂಬಸ್ಥರನ್ನ ಕಂಗಲಾಗಿಸಿದೆ.