ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಧಾರವಾಹಿ ಸಖತ್ ಸದ್ದು ಮಾಡುತ್ತಿದೆ.
ಕೂಡ ಕುಟುಂಬದ ಕಥೆಯನ್ನು ಮನೆ ಮಂದಿ ಮೆಚ್ಚಿಕೊಂಡಿದ್ದು ಧಾರವಾಹಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬೃಂದಾವನ ಧಾರವಾಹಿಯನ್ನು ನಾಯಕ ಆಕಾಶ್ ಪಾತ್ರಧಾರಿಯಾಗಿ ನಟಿಸುತ್ತಿರುವ ವರುಣ್ ಆರಾಧ್ಯ ನಟನೆಯನ್ನು ಜನ ಮೆಚ್ಚಿಕೊಂಡಿದ್ದಾರೆ.
ಬೃಂದಾವನ ಧಾರವಾಹಿಗೂ ಬರುವ ಮುನ್ನವೇ ವರಣ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದರು.
ಸಾಮಾಜಿಕ ಜಾಲಾ ತಾಣದಲ್ಲಿ ರೀಲ್ಸ್ ಗಳನ್ನು ಮಾಡುತ್ತಲೇ ಖ್ಯಾತಿ ಘಳಿಸಿದ್ದ ವರುಣ್ ಪ್ರೇಯಸಿ ವರ್ಷಾ ಕಾವೇರಿ ಜೊತೆ ರೀಲ್ಸ್ ಮಾಡಿ ಮತ್ತಷ್ಟು ಖ್ಯಾತಿ ಘಳಿಸಿದರು.
ಸಾಕಷ್ಟು ಸದ್ದು ಮಾಡುತ್ತಿರುವಾಗ್ಲೆ ವರುಣ್ ಹಾಗೂ ವರ್ಷ ಮಧ್ಯೆ ಬಿರುಕು ಮೂಡಿ ಇಬ್ಬರು ದೂರ ದೂರವಾದರು.
ಇಬ್ಬರು ಸಾಮಾಜಿಕ ಜಾಲಾ ತಾಣದಲ್ಲಿ ದೂರವಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆದರೆ ದೂರವಾಗಲು ಕಾರಣ ಮಾತ್ರ ತಿಳಿಸಿರಲಿಲ್ಲ.
ಇದೀಗ ವರುಣ್ ಹಾಗೂ ವರ್ಷ ದೂರವಾಗಿರುವ ಕುರಿತು ಸ್ವತಃ ವರುಣ್ ಆರಾಧ್ಯ ಸ್ಪಷ್ಟನೆ ನೀಡಿದ್ದಾರೆ.
ವರುಣ್ ಹಾಗೂ ವರ್ಷ ಇಬ್ಬರು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ವೇಳೆಯೇ ಇಬ್ಬರು ಬ್ರೇಕ್ ಅಪ್ ಕಪ್ ಕುರಿತು ಮಾತನಾಡಿದ್ದರು. ಇದು ಬಿಗ್ ಬಾಸ್ ಮನೆಗೆ ಹೋಗಲು ಮಾಡುತ್ತಿರುವ ನಾಟಕ ಎಂಬ ಸುದ್ದಿ ಹರಿದಾಡಿತ್ತು.
ಬ್ರೇಕ್ ಅಪ್ ಬಳಿಕ ವರುಣ್ ಗೆ ಬೃಂದಾವನ ಧಾರವಾಹಿಯಿಂದ ಆಫರ್ ಬಂದಿತ್ತು.ಮಧ್ಯ ರಾತ್ರಿ ಕರೆ ಮಾಡಿ ನಟಿಸ್ತೀರಾ ಎಂದು ಕೇಳಲಾಗಿತ್ತು. ಈ ವೇಳೆ ವರಣ್ ರಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು.
ಸಂದರ್ಶನವೊಂದರಲ್ಲಿ ಬ್ರೇಕ್ ಅಪ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವರುಣ್, ಕಾಲಾಯ ತಸ್ಮೈ ನಮಃ’ ಎಂದಿದ್ದಾರೆ.
ಬ್ರೇಕಪ್ ಆಗಬೇಕು ಅಂತಿತ್ತು ಕಾಣತ್ತೆ, ಬ್ರೇಕ್ ಅಪ್ ಆಯ್ತು.ಅದರ ಬಗ್ಗೆ ಮತ್ತೇನು ಮಾತು ಬೇಡ ಎಂದಿದ್ದಾರೆ.