ಬೆಂಗಳೂರು:- ಜಯನಗರ ಪೊಲೀಸರು ಕಾರ್ಯಚರಣೆ ನಡೆಸಿ ಸರಗಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು 26 ವರ್ಷಗಳ ಬಳಿಕ ಬಂಧಿಸಿದ್ದಾರೆ.
ಗುಲಾಬ್ ಖಾನ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಗುಲಾಬ್ ಖಾನ್ 1998ರ ಜನವರಿ 20 ರಂದು ಜಯನಗರದ 5ನೇ ಬ್ಲಾಕ್ನಲ್ಲಿ ಶ್ರೀಮತಿ ವಸಂತ ಎಂಬುವರ ಸರವನ್ನು ಕದ್ದು ಪರಾರಿಯಾಗಿದ್ದನು. ಜಯನಗರದಲ್ಲಿ ಕಳ್ಳತನ ಮಾಡಿದ ನಂತರ ಆರೋಪಿ ಗುಲಾಬ್ ಖಾನ್ ಯಾವುದೆ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ. ವೆಲ್ಡಿಂಗ್ ಕೆಲಸ ಮಾಡಿಕೊಂಡು ರಾಮನಗರದಲ್ಲಿ ನೆಲೆಸಿದ್ದನು.
ಇದೀಗ ಪೊಲೀಸರು ದೂಳು ಹಿಡಿದಿರುವ ಹಳೆ ಪ್ರಕರಣಗಳಿಗೆ ಇತಿಶ್ರೀ ಹೇಳಲು ನಿಂತಾಗ, ಗುಲಾಬ್ ಖಾನ್ ಕೇಸ್ ಆಚೆ ಬಂದಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಗುಲಾಬ್ ಖಾನ್ ರಾಮನಗರದಲ್ಲಿ ಇರುವುದು ತಿಳಿದಿದ್ದು, ಕೂಡಲೆ ಸ್ಥಳಕ್ಕೆ ತೆರಳಿ ಅರೆಸ್ಟ್ ಮಾಡಿದ್ದಾರೆ.
ಸದ್ಯ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಇನ್ನು ಗುಲಾಬ್ ಖಾನ್ 24ನೇ ವಯಸ್ಸಿನಲ್ಲಿ ಸರಗಳ್ಳತನ ಮಾಡಿದ್ದು, 50ನೇ ವಯಸ್ಸಿನಲ್ಲಿ ಅರೆಸ್ಟ್ ಆಗುತ್ತಿದ್ದಾನೆ.