ಎಲ್ಐಸಿ’ಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವಿದ್ಯಾಧನ್ ಸ್ಕಾಲರ್ʼಶಿಪ್ ಅನ್ನು ಲಾಂಚ್ ಮಾಡಿದೆ. ಹತ್ತನೇ ತರಗತಿ ಪಾಸ್ ಮಾಡಿದ್ದು 11ನೇ ತರಗತಿಗೆ ಪ್ರವೇಶ ಪಡೆದಿರುವವರು, ಪದವಿ ಓದುತ್ತಿರುವವರು, ಸ್ನಾತಕೋತ್ತರ ಪದವಿ ಓದುತ್ತಿರುವವರು ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಬಹುದು. ವಾರ್ಷಿಕವಾಗಿ ರೂ.25,000 ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಯಾರಿಗೆಲ್ಲಾ ಸಿಗುತ್ತೆ ಎಲ್ಐಸಿ ಹೆಚ್ಎಫ್ಎಲ್ ವಿದ್ಯಾಧನ್ ಸ್ಕಾಲರ್ಶಿಪ್ ?
- 10ನೇ ತರಗತಿ ಪಾಸಾದ ವಿದ್ಯಾರ್ಥಿ, ಪಿಯುಸಿ’ಗೆ ಪ್ರವೇಶ ಪಡೆದು ಅಧ್ಯಯನ ಮಾಡುತ್ತಿದ್ದಲ್ಲಿ ಅಂತಹವರಿಗೆ.
- ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ.
- ಪದವಿ ಪಾಸಾಗಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅಡ್ಮಿಷನ್ ಪಡೆದವರಿಗೆ.
- ಕನಿಷ್ಠ ಶೇಕಡ.60 ಅಂಕಗಳನ್ನು ತಮ್ಮ ಕೊನೆ ವರ್ಷದ ಪರೀಕ್ಷೆಯಲ್ಲಿ ಪಡೆದಿರಬೇಕು.
- ವಾರ್ಷಿಕ ಆದಾಯ ಗರಿಷ್ಠ ರೂ.3,60,000 ಮೀರಿರಬಾರದು.
ವಿದ್ಯಾರ್ಥಿವೇತನ ಯಾರಿಗೆ ಎಷ್ಟು?
ಹತ್ತನೇ ತರಗತಿ ಪಾಸಾದವರಿಗೆ : ವಾರ್ಷಿಕ Rs.15,000. ಎರಡು ವರ್ಷ.
ಪದವಿ ಅಧ್ಯಯನ ವಿದ್ಯಾರ್ಥಿಗಳಿಗೆ : ವಾರ್ಷಿಕ Rs.25,000. ಮೂರು ವರ್ಷ.
ಸ್ನಾತಕೋತ್ತರ ಪದವಿ ಅಧ್ಯಯನ ವಿದ್ಯಾರ್ಥಿಗಳಿಗೆ : ವಾರ್ಷಿಕ Rs.20,000. ಎರಡು ವರ್ಷ.
ವಿದ್ಯಾಧನ್ ವಿದ್ಯಾರ್ಥಿವೇತನ ಅರ್ಜಿಗೆ ಬೇಕಾದ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- 10ನೇ ತರಗತಿ ಅಂಕಪಟ್ಟಿ
- 12ನೇ ತರಗತಿ / ದ್ವಿತೀಯ ಪಿಯುಸಿ ಅಂಕಪಟ್ಟಿ
- ಯುಜಿ ಅಂಕಪಟ್ಟಿ
- ಬ್ಯಾಂಕ್ ಪಾಸ್ಬುಕ್
- ಅಭ್ಯರ್ಥಿ ಭಾವಚಿತ್ರ
- ಅಫಿಡೇವಿಟ್
- ಪ್ರವೇಶ ಪಡೆದ ರಶೀದಿ
ಅರ್ಜಿ ಸಲ್ಲಿಸುವ ವಿಧಾನ
- ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ www.lichousing.com ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಎಲ್ಐಸಿ ಎಚ್ಎಫ್ಎಲ್ ವಿದ್ಯಾಧನ್ ವಿದ್ಯಾರ್ಥಿವೇತನ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ಮತ್ತೊಂದು ಪುಟ ತೆರೆಯುತ್ತದೆ.
- ಆ ಪುಟದಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್, ಇ-ಮೇಲ್ ಐಡಿ ಇತ್ಯಾದಿ ವಿವರಗಳನ್ನು ಸಲ್ಲಿಸಿ ರಿಜಿಸ್ಟರ್ ಮಾಡಿಕೊಳ್ಳಿ.
- ನಂತರ ಎಲ್ಐಸಿ ಎಚ್ಎಫ್ಎಲ್ ವಿದ್ಯಾಧನ್ ವಿದ್ಯಾರ್ಥಿವೇತನ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
- ಆನ್ಲೈನ್ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
- ನಂತರ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನೀವು ಸಲ್ಲಿಸಿರುವ ಎಲ್ಲಾ ವಿವರಗಳು ಸರಿಯಾಗಿ ಇವೆಯೇ ಎಂದು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ.
- ಪರಿಶೀಲನೆ ಮಾಡಿಕೊಂಡ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ