ಬೆಂಗಳೂರು:- ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ ಕೊಟ್ಟಿದ್ದು, ಮೈತ್ರಿ ನಾಯಕರ ಭೇಟಿ ಇಂದೇ ನಡೆಯುತ್ತಾ? ಎಂಬ ಪ್ರಶ್ನೆ ಮೂಡಿದೆ.
ಮೈತ್ರಿ ಪ್ರಾಬಲ್ಯದ ಅಂಗಳದಲ್ಲೆ ಸೀಟ್ ಬೇಡಿಕೆಯ ಒತ್ತಡ ಹೆಚ್ಚಿಸಲು ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗುವ ಸಾಧ್ಯತೆಗಳಿವೆ. ಅಮಿತ್ ಶಾ, ಕುಮಾರಸ್ವಾಮಿ ಭೇಟಿ ಹಾಗೂ ಮಾತುಕತೆಗೆ ಸಾಂಸ್ಕೃತಿಕ ನಗರಿ ವೇದಿಕೆ ಆದರೂ ಅಚ್ಚರಿ ಇಲ್ಲ. ಮೈತ್ರಿ ಪಾಲಿನ ಹಕ್ಕು ಮಂಡಿಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಮಿತ್ ಶಾ ಮುಂದೆ ರಾಜಕೀಯ ದಾಳ ಉರುಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ಟಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿರುವುದು ಮೈತ್ರಿ ನಾಯಕರ ಮಾತುಕತೆಯ ಕುತೂಹಲವನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ.
ರಾಜ್ಯದ 28 ಕ್ಷೇತ್ರಗಳ ಕ್ಷೇತ್ರವಾರು ಸರ್ವೆ ಮಾಡಿಸಿರೋ ಅಮಿತ್ ಶಾ ಅವರು 28 ಕ್ಷೇತ್ರಗಳಲ್ಲಿ ಸೋಲು- ಗೆಲುವಿನ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಯಾವ ಕ್ಷೇತ್ರ ಜೆಡಿಎಸ್ಗೆ ಬಿಟ್ಟು ಕೊಡಬೇಕು ಅನ್ನೋ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.