ಸಕ್ಕರೆಗೆ ಜೇನುತುಪ್ಪವು ಒಂದು ಆರೋಗ್ಯಕರ ಪರ್ಯಾಯ. ಆದರೆ ಇತರ ಯಾವುದೇ ಆಹಾರ ಪದಾರ್ಥದಂತೆ, ಜೇನುತುಪ್ಪದ ಅತೀ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಹೂವಿನ ಮಕರಂದದಿಂದ ಜೇನುಗಳು ತಯಾರಿಸುತ್ತವೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ ಮತ್ತು ಹಲವಾರು ಇತರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಮತ್ತು ವಿವಿಧ ಟೀಗಳ ಸೇವನೆ ಕಾರಣ,
ಕಳೆದ ಕೆಲವು ತಿಂಗಳುಗಳಿಂದ ಜೇನಿನ ಸೇವನೆಯೂ ಹೆಚ್ಚಾಗಿದೆ. ಈ ಸಿಹಿ ಮಕರಂದವನ್ನು ಅಥವಾ ಜೇನುತುಪ್ಪವನ್ನು ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಸಂಭವಿಸಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಅತಿಯಾಗಿ ಜೇನುತುಪ್ಪವನ್ನು ಸೇವಿಸಿದಾಗ ಸಂಭವಿಸಬಹುದಾದ ಐದು ಸಂಗತಿಗಳು ಇಲ್ಲಿವೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ
ಜೇನುತುಪ್ಪದಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಅಧಿಕ ಪ್ರಮಾಣದಲ್ಲಿವೆ. ಆದ್ದರಿಂದ ಹೆಚ್ಚು ಜೇನು ತುಪ್ಪವನ್ನು ಸೇವಿಸಿದರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಮಧುಮೇಹಿಗಳು ಅಧಿಕ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯಾಗಬಹುದು, ಇದು ಅಪಾಯಕಾರಿ..
ಹೊಟ್ಟೆಯ ಸಮಸ್ಯೆ
ಹೆಚ್ಚು ಜೇನುತುಪ್ಪದ ಸೇವನೆ ಮಾಡಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು, ಮಲಬದ್ಧತೆಯಂತಹ ಜೀರ್ಣಕ್ರಿಯೆಗೆ ತೊಂದರೆಗಳೂ ಇನ್ನಷ್ಟು ಉಲ್ಬಣಗೊಳಿಸಬಹುದು. ಜೇನುತುಪ್ಪದಲ್ಲಿ ಇರುವಂತಹ ಅಧಿಕ ಫ್ರಕ್ಟೋಸ್ ಅಂಶವು ಯಾವುದೇ ಅಸ್ತಿತ್ವದಲ್ಲಿರುವ ಸಮಸ್ಯೆ ಇಲ್ಲದಿದ್ದರೂ, ಮಲಬದ್ಧತೆಗೆ ಕಾರಣವಾಗಬಹುದು. ಇದು ದೇಹ ಒಂದೇ ಬಾರಿಗೆ ಅತಿ ಹೆಚ್ಚು ಸಕ್ಕರೆಯನ್ನು ಜೀರ್ಣಿಸಲಾರದ ಕಾರಣ, ಹೊಟ್ಟೆ ಅಥವಾ ಅತಿಸಾರಕ್ಕೆ ಕಾರಣವಾಗಬಹುದು.
ಜೇನುತುಪ್ಪ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು
ಅಧಿಕ ರಕ್ತದೊತ್ತಡ ಇರುವವರಿಗೆ ಜೇನುತುಪ್ಪವು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ರಕ್ತದೊತ್ತಡ ಕಡಿಮೆಯಾಗಬಹುದು. ದೀರ್ಘಾವಧಿಯಲ್ಲಿ, ಕಡಿಮೆ ರಕ್ತದೊತ್ತಡವು ಹೃದಯದ ಕಾರ್ಯದ ಮೇಲೆ ಪರಿಣಾಮ ಬೀರಬಹುದು.
ಇದು ತೂಕ ಹೆಚ್ಚಲು ಕಾರಣವಾಗಬಹುದು
ತೂಕ ಇಳಿಸಲು ಏನೇನೋ ಕಸರತ್ತು ಮಾಡುತ್ತಿದ್ದರೆ, ಸೇವಿಸುವ ಜೇನುತುಪ್ಪದ ಪ್ರಮಾಣವನ್ನು ನಿಯಂತ್ರಿಸುವುದು ಅತೀ ಅಗತ್ಯ. ಜೇನುತುಪ್ಪದಲ್ಲಿ ಇರುವಂತಹ ಹೆಚ್ಚುವರಿ ಕ್ಯಾಲೋರಿಗಳು, ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ತೂಕ ನಷ್ಟದ ಗುರಿಗಳನ್ನು ಹಿಮ್ಮೆಟ್ಟಿಸಬಹುದು.
ದಂತ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು
ಅತಿಯಾದ ಜೇನುತುಪ್ಪ ಎಂದರೆ ಅತಿಯಾದ ಸಕ್ಕರೆ, ಇದು ಹಲ್ಲುಗಳ ಕೊಳೆಯನ್ನು ಉತ್ತೇಜಿಸುತ್ತದೆ. ಯುಎಸ್ ಡಿಎ ರಾಷ್ಟ್ರೀಯ ಪೋಷಕಾಂಶ ದತ್ತ ಸಂಚಯ ಪ್ರಕಾರ ಶೇ.82 ರಷ್ಟು ಜೇನುತುಪ್ಪವು ಸಕ್ಕರೆಯ ರೂಪದಲ್ಲಿದ್ದು, ಇದು ಹಲ್ಲುಗಳಿಗೆ ಹಾನಿ ಉಂಟು ಮಾಡುತ್ತದೆ. ಜೇನು ಅಂಟು ಅಂಟು, ಅಂದರೆ ಇದು ನಿಮ್ಮ ಹಲ್ಲುಗಳಿಗೆ ಅಂಟಿಕೊಳ್ಳಬಹುದು ಮತ್ತು ಹಲ್ಲುಗಳ ಕೊಳೆಯುವಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಜೇನುತುಪ್ಪ ಎಷ್ಟು ಸುರಕ್ಷಿತ?
ಜೇನುತುಪ್ಪವನ್ನು ಸೇವಿಸುವಾಗ ಮಿತವಾದ ಅಭ್ಯಾಸ ಮಾಡುವುದು ಮುಖ್ಯ. ಪ್ರತಿದಿನ ಸುಮಾರು 50 ಮಿಲಿ ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು. ಮೇಲೆ ಹೇಳಿದ ಸಮಸ್ಯೆಗಳನ್ನು ತಪ್ಪಿಸಲು ಓವರ್ ಬೋರ್ಡ್ಗೆ ಹೋಗಲೇಬಾರದು.