ಪ್ರಧಾನ ಮಂತ್ರಿ ಅಟಲ್ ಪೆನ್ಷನ್ ಯೋಜನಾ ಸರ್ಕಾರದಿಂದ ನಡೆಸಲಾಗುವ ವೃದ್ಧಾಪ್ಯ ಪಿಂಚಣಿ ಯೋಜನೆಗಳಲ್ಲಿ ಒಂದು. ಎಂಟು ವರ್ಷದ ಹಿಂದೆ ಶುರುವಾದ ಈ ಯೋಜನೆ ಎಲ್ಲರಿಗೂ ಮುಕ್ತವಿದೆ. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಬಹಳ ಅನುಕೂಲವಾಗಿರುವ ಪೆನ್ಷನ್ ಸ್ಕೀಮ್ ಇದು. 18 ವರ್ಷದಿಂದ 40 ವರ್ಷದ ವಯೋಮಾನದ ಯಾವುದೇ ಭಾರತೀಯ ಪ್ರಜೆ ಅಟಲ್ ಪೆನ್ಷನ್ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಬಹುದು.
ಕನಿಷ್ಠ 20 ವರ್ಷ ಅವಧಿಯವರೆಗೆ ಪೆನ್ಷನ್ ನಿಧಿಗೆ ಹಣ ಪೂರೈಸಬೇಕು. ಅಟಲ್ ಪೆನ್ಷನ್ ಯೋಜನೆಯ ಸದಸ್ಯರು 60 ವರ್ಷದ ಬಳಿಕ ಪ್ರತೀ ತಿಂಗಳು 1,000 ರೂನಿಂದ 5,000 ರೂವರೆಗೆ ಕನಿಷ್ಠ ಖಾತ್ರಿ ಪಿಂಚಣಿ ಪಡೆಯಬಹುದು. ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ಆದಾಯ ತೆರಿಗೆ ಪಾವತಿಸುವವರಲ್ಲದವರಿಗೆ ಸರ್ಕಾರ ವರ್ಷಕ್ಕೆ ಒಂದು ಸಾವಿರ ರೂವರೆಗೂ ಕೊಡುಗೆ ನೀಡುತ್ತದೆ.