ಬೆಂಗಳೂರು: ಸರ್ಕಾರ, ವಕ್ಫ್ ಆಸ್ತಿಗಳಿಗೆ ಕಾಂಪೌಂಡ್ ಕಟ್ಟಿಸಿಕೊಡಲು 31 ಕೋಟಿ ರೂಪಾಯಿ ಉಡುಗೊರೆ ನೀಡಲು ಮುಂದಾಗಿದೆ ಎಂದು ಪ್ರತಿಪಕ್ಷದ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬರದಿಂದ ಹೈರಾಣಾಗಿರುವ ರೈತರಿಗೆ ನೆರವು ನೀಡಲು ಹಣವಿಲ್ಲ ಎಂದು ಗಾಯದ ಮೇಲೆ ಬರೆ ಎಳೆಯುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ವಕ್ಫ್ ಆಸ್ತಿಗಳಿಗೆ ಕಾಂಪೌಂಡ್ ಕಟ್ಟಿಸಿಕೊಡಲು 31 ಕೋಟಿ ರೂಪಾಯಿ ಉಡುಗೊರೆ ನೀಡಲು ಮುಂದಾಗಿದೆ.
ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ನಾಡಿಗೆ ಅನ್ನ ನೀಡುವ ರೈತರ ಹಿತರಕ್ಷಣೆಗಿಂತ ಮುಸ್ಲಿಮರ ಓಲೈಕೆ ಮಾಡಿ ತಮ್ಮ ವೋಟ್ ಬ್ಯಾಂಕ್ ರಕ್ಷಣೆ ಮಾಡಿಕೊಳ್ಳುವುದೇ ಆದ್ಯತೆಯಾಗಿದೆ.
ರಾಜ್ಯ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿ ರಾಜ್ಯದ ಒಟ್ಟು 416 ವಕ್ಫ್ ಆಸ್ತಿಗಳಸಂರಕ್ಷಣೆಗಾಗಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು 31.84 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.