ಲಿಕಾನ್ ಸಿಟಿಯಲ್ಲಿ ಬೇಸಿಗೆಯ ಬೇಗೆ ಈಗಲೇ ಶುರುವಾಗಿದೆ. ಒಂದು ಕಡೆ ರಣಭೀಕರ ಬಿಸಿಲು ರಾಜಧಾನಿ ಮಂದಿಗೆ ನೆತ್ತಿ ಸುಡ್ತಿದೆ. ಮತ್ತೊಂದು ಕಡೆ ಜೀವಜಲಕ್ಕಾಗಿ ಪರದಾಟ ಶುರುವಾಗಿದೆ. ಕುಡಿಯುವ ನೀರಿಗೂ ಹಾಹಾಕಾರ ಬಂದೊದಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಮಾತ್ರ ನೀರು ಬರ್ತಿದ್ದು, ಜನ ಪರದಾಡ್ತಿದ್ದಾರೆ
ಕಾವೇರಿ ನೀರು ಬರ್ತಿಲ್ಲ…ಬೋರ್ ವೆಲ್ ಕೂಡ ವರ್ಕ್ ಆಗ್ತಿಲ್ಲ..ಅತ್ತ ಟ್ಯಾಂಕರ್ ನೀರಿಗೆ ಮೊರೆಹೋದ್ರೆ ರೇಟ್ ಕೈಗೆಟಕುತ್ತಿಲ್ಲ. ಇಂತಹ ಪರಿಸ್ಥಿತಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. ಇದರ ನಡುವೆ ಕುಡಿಯುವ ನೀರಿಗೂ ಸಂಕಟ ಶುರುವಾಗಿದೆ. ಬಹುತೇಕ ಜನರಿಗೆ ಆಸರೆಯಾಗಿದ್ದು ಬಿಬಿಎಂಪಿಯ ಶುದ್ದ ಕುಡಿಯುವ ನೀರಿನ ಘಟಕದಲ್ಲಿಯೂ ನೀರಿನ ಕೊರತೆ ಎದುರಾಗಿದೆ. ಬಹುತೇಕ ಫ್ಲಾಂಟ್ ಗಳ ಮುಂದೆ ನೀರಿಲ್ಲ ಸಹಕರಿಸಿ ಎಂಬ ಬೋರ್ಡ್ ರಾರಾಜಿಸ್ತಿವೆ.
ಈ ದೃಶ್ಯ ನೋಡಿ ಇದು ಆರ್.ಆರ್. ನಗರದ ಬಿಹೆಚ್ಇಲ್ ಲೇಔಟ್ ಶುದ್ದ ಕುಡಿಯು ನೀರಿನ ಘಟಕ..ಆದರೆ ಈ ಘಟಕದ ಮುಂದೆ ನೀರಿನ ಕೊರತೆಯ ಬಗ್ಗೆ ಬೋರ್ಡ್ ಹಾಕಾಲಾಗಿದೆ. ನೀರಿನ ಅಭಾವವಿರುವುದರಿಂದ ಪ್ರತಿದಿನ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮುಚ್ಚಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ ಎಂಬ ನಾಮಫಲಕ ಹಾಕಲಾಗಿದೆ. ನೀರಿಗೂ ಟೈಂ ಫಿಕ್ಸ್ ಆದ ಕಾರಣ ಜನ ಮಾರುದ್ದ ಲೈನ್ ನಿಂತು ನೀರು ತುಂಬಿಸಿಕೊಳ್ತಿದ್ದಾರೆ.
ಜಲಮಂಡಳಿಯವರು ಕಾವೇರಿ ನೀರನ್ನು ಸರಿಯಾಗಿ ಬಿಡ್ತಿಲ್ಲಂತೆ. ಬೋರ್ವೆಲ್ಗಳಲ್ಲಿರುವ ನೀರು ಬತ್ತಿ ಹೋಗಿ ಜನರಿಗೆ ಸಮಸ್ಯೆ ಉಂಟಾಗಿದೆ. ಟ್ಯಾಕರ್ ನೀರಿಗೆ ಮೂರು ಪಟ್ಟು ಹಣ ವಸೂಲಿ ಮಾಡ್ತಿದ್ದಾರೆ. ಈಗ ಶುದ್ದ ಕುಡಿಯುವ ನೀರುಗೂ ಕೊರೆತೆಯಾಗಿದೆ. ಈಗ್ಲೆ ಹೀಗಾದ್ರೆ ಏಫ್ರಿಲ್ ಮೇನಲ್ಲಿ ಸ್ಥಿತಿ ಹೇಗೆ ಅಂತಿದ್ದಾರೆ ಜನರು. .
ಸುಕನ್ಯಾ ಸಮೃದ್ಧಿ ಯೋಜನೆ ಹೊಂದಿದ್ದೀರಾ: ಹಾಗಿದ್ರೆ ಈ ಕೆಲಸ ಮಾಡಲೇಬೇಕು, ಇಲ್ಲದಿದ್ರೆ ಖಾತೆ ನಿಷ್ಕ್ರೀಯ
ಇಲ್ಲಿ ಮಾತ್ರವಲ್ಲ ಚನ್ನಸಂದ್ರದ ಆರ್.ಓ. ಪ್ಲಾಂಟ್ ನಲ್ಲೂ ಇದೇ ಬೋರ್ಡ್ ಹಾಕಲಾಗಿದೆ. ಜನರು ಬೇರೆ ವಿಧಿಯಿಲ್ಲದೆ ಓಪನ್ ಇರುವಾಗ ಬಂದು ನೀರು ತುಂಬಿಸಿಕೊಂಡ ಹೋಗ್ತಿದ್ದಾರೆ. ಅತ್ತ ವಿನಾಯಕ ಸರ್ಕಲ್ ನ ಶುದ್ದ ಕುಡಿಯುವ ನೀರಿನ ಘಟಕ್ಕೆ ಬೀಗ ಹಾಕಲಾಗಿದೆ. ಜನರು ಕ್ಯಾನ್ ತಂದು ನೀರು ಖಾಲಿಯಾಗಿದೆ ಎಂಬ ಬೋರ್ಡ್ ನೋಡಿ ವಾಪಸ್ ಹೋಗ್ತಿದ್ದಾರೆ. ಇಷ್ಡು ಮಾತ್ರವಲ್ಲ ಹಲವು ಕಡೆ ಕುಡಿಯುವ ನೀರಿನ ಘಟಕ ದಿನಕ್ಕೆ ಮೂರು ಗಂಟೆ ಮಾತ್ರ ತೆರೆಯಲಾಯ್ತಿದೆಯಂತೆ. ಅತ್ತ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಾಹಣೆ ಮಾಡ್ತಿರುವ ಗುತ್ತಿಗೆದಾರರನ್ನ ಕೇಳಿದ್ರೆ, ಬೋರ್ ಬತ್ತಹೋಗಿದ್ದಾವೆ ಅದಕ್ಕೆ ಬೋರ್ಡ್ ಹಾಕಲಾಗಿದೆ. ಎಷ್ಟೇ ಅಳ ಕೊರೆಸಿದ್ರು ನೀರು ಬರ್ತಿಲ್ಲ ಬರೋವಷ್ಟು ದಿನ ನೀರು ಕೊಡ್ತೀವಿ ಅಂತಿದ್ದಾರೆ.
ಮಳೆ ಕೊರತೆಯಿಂದ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಹೀಗಾಗಿ ಬೇರ್ ವೇಲ್ ಗಳು ಬತ್ತಿ ಹೋಗಿವೆ. ಹೀಗಾಗಿ ಶುದ್ಧ ಘಟಕಗಳಿಗೆ ಬೇಕಾದಷ್ಟು ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಈಗಾಗಲೇ ಹಲವು ಭಾಗದಲ್ಲಿ ನೀರಿನ ಕೊರತೆ ನಿಧಾನಕ್ಕೆ ಶುರುವಾಗಿದೆ. ಕೆಲ ಘಟಕಗಳು ಬಂದ್ ಆಗಿವೆ. ಕುಡಿಯುವ ನೀರು ಸಿಗದೇ ಜನ ಹೈರಾಣಾಗಿದ್ದಾರೆ. ಇತ್ತ ಜಲ ಮಂಡಳಿಗೆ ನೀರು ಪೂರೈಸುವುದೇ ದೊಡ್ಡ ತಲೆನೋವಾಗಿದೆ. ಬೇಸಿಗೆ ಆರಂಭದಲ್ಲೇ ಹೀಗಾದ್ರೆ ಮುಂದೆ ಹೇಗೆ ಎಂಬ ಆತಂಕ ಕಾಡ್ತಿದೆ.