ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ರೈತರ ಮೆರವಣಿಗೆಗೆ ಮೊದಲೇ ದೆಹಲಿಯ ಬಹುಮುಖ್ಯ ರಸ್ತೆಗಳಿಗೆ ಸಂರ್ಪಕಿಸುವ ಹೆದ್ದಾರಿಗಳಲ್ಲಿ ತೀವ್ರ ಟ್ರಾಫಿಕ್ ಉಂಟಾಗಿದೆ. ಇದರಿಂದ ವಾಹನ ಸವಾರರು ಒಂದು ಕಿಲೋಮೀಟರ್ಗೆ ಒಂದು ಗಂಟೆ ಕಾಯುವಂತಾಗಿದೆ. ದೆಹಲಿಯ ಗಾಜಿಯಾಬಾದ್ ಮತ್ತು ಉತ್ತರ ಪ್ರದೇಶದ ನೋಯ್ಡಾದೊಂದಿಗೆ ಸಂಪರ್ಕಿಸುವ ಗಾಜಿಪುರ ಮತ್ತು ಚಿಲ್ಲಾ ಗಡಿ ಹೆದ್ದಾರಿಯಲ್ಲಿ ತೀವ್ರ ಟ್ರಾಫಿಕ್ ಉಂಟಾಗಿದೆ.