ಬಿಗ್ ಬಾಸ್ ಸೀಸನ್ 10ರಲ್ಲಿ ಉತ್ತಮ ಸ್ನೇಹಿತರಾಗಿ ಸಂತು, ಪಂತು ಎಂದೇ ಖ್ಯಾತಿ ಘಳಿಸಿರುವ ಹಾಸ್ಯ ಕಲಾವಿನ ತುಕಾಲಿ ಸಂತೋಷ್ ಹಾಗೂ ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್ ಇದೀಗ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಈ ಇಬ್ಬರ ಕುರಿತಂತೆ ಸಿನಿಮಾವೊಂದು ಮೂಡಿ ಬರಲಿದೆ ಎಂದು ಹೇಳಲಾಗುತ್ತಿದ್ದು ಚಿತ್ರಕ್ಕೆ ಸಂತು ಪಂತು ಎಂದು ಹೆಸರಿಡಲಾಗಿದೆ.
ಈ ಬಗ್ಗೆ ತುಕಾಲಿ ಸಂತೋಷ್ ಪ್ರತಿಕ್ರಿಯಿಸಿದ್ದು, ಸಿನಿಮಾದ ಸ್ಕ್ರಿಪ್ಟ್ ರೆಡಿಯಿದೆ. ನಿರ್ಮಾಪಕರೂ ಕೂಡ ಇದ್ದಾರೆ. ಆದರೆ ಈ ಸಿನಿಮಾ ಯಾವಾಗ ಆಗುತ್ತದೆಯೋ ಗೊತ್ತಿಲ್ಲ ಎಂದಿದ್ದಾರೆ.
ಸದ್ಯ ತುಕಾಲಿ ಸಂತೋಷ್ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ರೆ, ವರ್ತೂರು ಸಂತೋಷ್, ಹಳ್ಳಿಕಾರ್ ಪಂದ್ಯವನ್ನು ಆಯೋಜಿಸಲು ತಯಾರಿ ನಡೆಸುತ್ತಿದ್ದಾರೆ. ಈ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡ್ತಾರಾ ಅಥವಾ ಇದೆಲ್ಲಾ ಬರೀ ಗಾಳಿ ಸುದ್ದಿಯಷ್ಟೇಯ ಎಂಬುದನ್ನು ಕಾದು ನೋಡಬೇಕಿದೆ.