ಸಾಕಷ್ಟು ಜನರು ಹಾಸಿಗೆಯ ಮೇಲೆ ಕುಳಿತು ಮಡಿಲಲ್ಲಿ ಲ್ಯಾಪ್ಟಾಪ್ ಇಟ್ಟುಕೊಂಡು ಕೆಲಸಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಸಣ್ಣ ತಪ್ಪು ನಿಮ್ಮ ಆರೋಗ್ಯದ ಅಪಾಯಕಾರಿ ಪರಿಣಾಮವನ್ನುಂಟು ಮಾಡಬಹುದು. ಲ್ಯಾಪ್ಟಾಪ್ ಅನ್ನು ನಿಮ್ಮ ಮಡಿಲಲ್ಲಿ ಇಟ್ಟುಕೊಂಡು ಹಾಸಿಗೆಯ ಮೇಲೆ ಕೆಲಸ ಮಾಡುವುದು ಒಂದು ಕ್ಷಣ ಪರಿಹಾರವನ್ನು ನೀಡುತ್ತದೆ. ಆದರೆ ಎರಡು ನಿಮಿಷದ ವಿಶ್ರಾಂತಿ ಭವಿಷ್ಯದಲ್ಲಿ ಎಷ್ಟು ದೊಡ್ಡ ಸಮಸ್ಯೆಯನ್ನು ತರಬಹುದು ಎಂದು ಯಾರೂ ಊಹಿಸುವುದಿಲ್ಲ. ಆದ್ದರಿಂದ ಈ ಅಭ್ಯಾಸನಿಮ್ಮ ಆರೋಗ್ಯ ಮೇಲೆ ಯಾವ ರೀತಿ ಹಾನಿಯುಂಟು ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಲ್ಯಾಪ್ಟಾಪ್ನಿಂದ ಹೊರಬರುವ ಬಿಸಿ ಗಾಳಿಯು ಚರ್ಮದ ಮೇಲೆ ಕಿರಿಕಿರಿಯನ್ನು ಉಂಟುಮಾಡಬಹುದು, ಇದನ್ನು ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಆದ್ದರಿಂದ ಮಡಿಲಲ್ಲಿ ಲ್ಯಾಪ್ಟಾಪ್ ಇಟ್ಟುಕೊಂಡು ಹೆಚ್ಚು ಹೊತ್ತು ಕೆಲಸಮಾಡುವುದು ಚರ್ಮದ ಕಾಯಿಲೆಗಳಿಗೆ ಕಾರಣವಾಗಬಹುದು.
ಮಡಿಲಲ್ಲಿ ಲ್ಯಾಪ್ಟಾಪ್ ಇಟ್ಟುಕೊಂಡು ಕೆಲಸಮಾಡುವುದು ಪುರುಷರಲ್ಲಿ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಲ್ಯಾಪ್ಟಾಪ್ಗಳಿಂದ ಹೊರಬರುವ ಬಿಸಿ ಗಾಳಿಯು ವೀರ್ಯದ ಸಂಖ್ಯೆ ಮತ್ತು ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
ನಿಮ್ಮ ತೊಡೆಯ ಮೇಲೆ ಲ್ಯಾಪ್ಟಾಪ್ ಬಳಸುವುದು ಮತ್ತು ತಪ್ಪು ಭಂಗಿಯಲ್ಲಿ ಕುಳಿತುಕೊಳ್ಳುವುದು ಬೆನ್ನುನೋವಿಗೆ ಕಾರಣವಾಗಬಹುದು. ನೇರವಾಗಿ ಕುಳಿತುಕೊಳ್ಳದೆ ಬಗ್ಗಿ ಅಥವಾ ಅರ್ಥ ಮಲಗಿದ ರೀತಿಯಲ್ಲಿ ಕುಳಿತುಕೊಳ್ಳುವುದು ಬೆನ್ನು ನೋವು ಹಾಗೂ ಬೆನ್ನಿನ ಮೇಲೆ ಒತ್ತಡಕ್ಕೆ ಕಾರಣವಾಗುತ್ತದೆ.
ಆದ್ದರಿಂದ ಲ್ಯಾಪ್ಟಾಪ್ ಅನ್ನು ಮೇಜಿನ ಮೇಲೆ ಇರಿಸಿ ಕೆಲಸ ಮಾಡುವುದು ಉತ್ತಮ. ಕಣ್ಣಿನ ಆರೈಕೆಗಾಗಿ, ಪ್ರತಿ 20-30 ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಿ ಮತ್ತು ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ. ಈ ಸಲಹೆಗಳನ್ನು ಅನುಸರಿಸುವ ಮೂಲಕ ಲ್ಯಾಪ್ಟಾಪ್ ಅನ್ನು ನಿಮ್ಮ ಮಡಿಲಲ್ಲಿ ಇಟ್ಟುಕೊಳ್ಳುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು