ಮಂಗನ ಬಾವು (ಪರೊಟಿಟಿಸ್ ಎಂದೂ ಹೆಸರಾಗಿದೆ) ಗಂಭೀರವಾದ ವೈರಾಣು ಕಾಯಿಲೆ. ಇದರಿಂದ ಪರೊಟಿಡ್ ಗ್ರಂಥಿಗಳು ದೊಡ್ಡದಾಗಿ ನೋವು ಉಂಟಾಗುವುದು. ಈ ಗ್ರಂಥಿಗಳು ಕಿವಿಯ ಕೆಳಗೆ ಮತ್ತು ಮುಂಭಾಗದಲ್ಲಿ ಇರುತ್ತವೆ ಮತ್ತು ಜೊಲ್ಲುರಸ ಅಥವ ಉಗುಳನ್ನು ಉತ್ಪಾದಿಸುವುದು ..
ಕಾರಣ ಏನು ?
ಮಂಗನ ಬಾವು ವೈರಾಣುವಿನಿಂದ ಹರಡುವ ಒಂದು ಸಾಂಕ್ರಾಮಿಕ ರೋಗ. ಸೊಂಕಿತ ಜೊಲ್ಲಿನ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವುದು. 2 ರಿಂದ 12 ವರ್ಷದವರೆಗಿನ ಮಕ್ಕಳಿಗೆ ಸೋಂಕು ತಗುಲುವ ಸಂಭವ ಹೆಚ್ಚು. ವಯಸ್ಕರಲ್ಲಿ ಪರಾಟಿಡ್ ಗ್ರಂಥಿಯ ಜೊತೆಗೆ ಅದರ ಅಂಗಗಳಾದ ತರಡು ಬೀಜಗಳು, ಪ್ಯಾಂಕ್ರಿಯಾಸ್, ಮತ್ತು ನರಮಂಡಲಗಳು ತೋಂದರೆಗೆ ಒಳಗಾಗುತ್ತವೆ. ರೋಗವು ಗುಪ್ತಾವಸ್ಥೆಯಲ್ಲರುವ ಸೋಂಕು ತಗುಲಿ ಅದು ಹೊರಬರುವ ಅವಧಿ ಸಾಧಾರಣವಾಗಿ 2 ರಿಂದ 24 ದಿನಗಳು.
ಲಕ್ಷಣಗಳು ಯಾವುವು ?
ಪರಾಟಿಡ್ ಗ್ರಂಥಿಯ ನೋವು ಸಹಿತ ಬಾವು ,ಮೊದಲಲ್ಲಿ ಒಂದು ಕಡೆ 3 ರಿಂದ 5 ದಿನಗಳಲ್ಲಿ ಎರಡೂ ಗ್ರಂಥಿಗಳು ಬತುಕೊಳ್ಳುವವು. ಆಹಾರವನ್ನು ನುಂಗುವಾಗ ಮತ್ತು ಅಗಿಯುವಾಗ ನೋವು ಹೆಚ್ಚಾಗುವುದು. ಹುಳಿಯಾದ ಮತ್ತು ಹೆಚ್ಚು ಜೊಲ್ಲು ತರಿಸುವ ಆಹಾರ ಪದಾರ್ಥಗಳು , ಪಾನಿಯಗಳು ನೊವನ್ನು ಹೆಚ್ಚಿಸುತ್ತವೆ. ಅತಿಹೆಚ್ಚು ಜ್ವರ, ತಲೆನೋವು ಮತ್ತು ಹಸಿವಾಗದಿರುವುದು ಇದರ ಲಕ್ಷಣ. ಜ್ವರವು 3 ರಿಂದ 4 ದಿನಗಳಲ್ಲಿ ಕಡಿಮೆಯಾದರೆ ಗ್ರಂಥಿಯ ಊತವು 7 ರಿಂದ 10 ದಿನಗಳಲ್ಲಿ ಕಡಿಮೆಯಾಗುವುದು. ಮಗುವು ರೋಗವನ್ನು ಗ್ರಂಥಿಯ ಬಾವು ಇರುವವರೆಗೆ ಅಂದರೆ 7 ರಿಂದ 10 ದಿನಗಳ ವರೆಗೆ ಹರಡಬಹುದು. ಈ ಅವಧಿ ಯಲ್ಲಿ ಮಗುವನ್ನು ಇತರರಿಂದ ದೂರ ಇಡಬೇಕು. ಶಾಲೆಗೆ ಹೋಗಬಾರದು. ವಯಸ್ಸಾದ ಗಂಡಸರಲ್ಲಿ ಗ್ರಂಥಗಳ ನೋವಿನ ಜೊತೆ ನೋವಿನಿಂದ ಕೂಡಿದ ತರಡು ಬೀಜದ ಊತ ವೂ ಇರುವುದು (ಒರ್ಚಿಟಿಸ್). ಮಂಗನ ಬಾವು ಮೆದುಳಿನ ಉರಿಯೂತಕ್ಕೆ ಕಾರಣವಾಗಬಹುದು.
(ಎನಸೆಫಲೈಟಿಸ್). ಕೆಳಗಿನ ಲಕ್ಷಣಗಳಿದ್ದರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. :
ತೀವ್ರ ತಲೆ ನೋವು
ಕತ್ತು ಬಿಗಿತ
ಮಂಪರು
ಸೆಳೆತ
ತುಂಬ ವಾಂತಿ
ತೀವ್ರ ಜ್ವರ
ಹೊಟ್ಟೆನೋವು.
ತರಡು ಬೀಜಗಳ ಬಾವು.
ಚಿಕಿತ್ಸೆ ಏನು?
ಮಂಗನ ಬಾವಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಇದರ ಅನೇಕ ಲಕ್ಷಣಗಳನ್ನು ಔಷಧಗಳ ಮೂಲಕ ನಿವಾರಿಸಬಹುದು. ಆಂಟಿಬಯಾಟಿಕ್ಸ ಅನ್ನು ಸಾಧಾರಣವಾಗಿ ನೀಡುವುದಿಲ್ಲ. ಜ್ವರವನ್ನು ಪ್ಯಾರಸೀಟಮೋಲ್ ನಿಂದ ನಿಯಂತ್ರಿಸಬಹುದು. ಅದು ನೋವನ್ನೂ ಕಡೆಮೆ ಮಾಡುವುದು. ಮಕ್ಕಳಿಗೆ ಆಸ್ಪರಿನ್ ಕೊಡುವುದಿಲ್ಲ. ಸಪ್ಪನೆಯ ಅಹಾರ ಕೊಡಬೇಕು. ಹೆಚ್ಚು ದ್ರವ ನೀಡಬೇಕು. ಹುಳಿಯಾದ ಆಹಾರ ಮತ್ತು ಪಾನಿಯಗಳನ್ನು ಕೊಡಬಾರದು. ಮಂಗನ ಬಾವು ಬಂದ ಮಗುವು ಯಾವಾಗಲೂ ಹಾಸಿಗೆಯ ಮೇಲೇಯೇ ಮಲಗಿರಬೇಕಿಲ್ಲ. .
ಅದನ್ನು ತಡೆಯುವುದು ಹೇಗೆ?
ಒಂದು ಸಲ ಮಂಗನ ಬಾವು ಬಂದರೆ ಅದು ಮತ್ತೆ ಬರುವುದಿಲ್ಲ. ಜೀವಮಾನಪರ್ಯಂತ ನಿರೋಧತೆ ಬಂದಿರುತ್ತದೆ. ಮಂಗನ ಬಾವು ಬಂದಿರದ ಮಕ್ಕಳಿಗೆ ಅದರ ವಿರುದ್ಧ ರಕ್ಷಣೆ ನೀಡಲು ವ್ಯಾಕ್ಸಿನ್ ಲಭ್ಯವಿದೆ. ಎಂ.ಎಂ.ಆರ್ ವ್ಯಾಕ್ಸಿನ್ ಮಗುವಿಗೆ ಮೂರು ವೈರಲ್ ರೋಗಗಳಾದ ಮೀಸಲ್ಸ, ಮಂಗನ ಬಾವು ಮತ್ತು ರುಬೆಲ್ಲಾ ವಿರುದ್ಧ ರಕ್ಷಣೆ ನೀಡುವುದು. ಇದನ್ನು ಎಲ್ಲ ಮಕ್ಕಳಿಗೆ 15 ತಿಂಗಳಾದಾಗ ಕೊಡ ಬೇಕು. ಒಂದು ವರ್ಷದ ಒಳಗಿನ ಶಿಶುಗಳಿಗೆ, ಜ್ವರ ಬಂದವರಿಗೆ ಗರ್ಭೀಣಿ ಮಹಿಳೆಗೆ ನೀಡಬಾರದು.
ಸಮಸ್ಯೆಗಳು ಯಾವುವು?
ಮಂಗನ ಬಾವು ಕೆಲವು ಸಲ ಮೆದುಳಿನ ಸೋಂಕಿಗೆ ಕಾರಣವಾಗಬಹುದು (ಎನ್ಸೆಫಲೆಟಿಸ). ಅದು ಬಹು ಗಂಭೀರವಾದ ಸಮಸ್ಯೆ ತರಡು ಬೀಜಗಳು ಸೋಂಕಿಗೆ ಒಳಗಾದರೆ ಬಂಜೆತನ ಬರಬಹುದು.