ಅಬುಧಾಬಿ:- ಯುಎಇ ಹಿಂದು ದೇಗುಲದ ಶಿಲೆಯಲ್ಲಿ ‘ವಸುದೈವ ಕುಟುಂಬಕಂ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆತ್ತಿದ್ದಾರೆ.
ಅಬುಧಾಬಿಯಲ್ಲಿ ನಿರ್ಮಾಣ ಮಾಡಲಾಗಿರುವ ದೇಶದ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ದೇಗುಲ ಲೋಕಾರ್ಪಣೆಗೂ ಮೊದಲು ಮೋದಿ ಅವರು, ಬಿಎಪಿಎಸ್ ಹಿಂದೂ ದೇವಾಲಯದಲ್ಲಿ ‘ವಸುಧೈವ ಕುಟುಂಬಕಂ’ ಸಂದೇಶವನ್ನು ಕಲ್ಲಿನ ಮೇಲೆ ಕೆತ್ತಿದ್ದಾರೆ. ಈ ಕುರಿತಾದ ವಿಡಿಯೋ ಕೂಡ ವೈರಲ್ ಆಗಿದೆ.
ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಅಬುಧಾಬಿಯಲ್ಲಿ ಭವ್ಯವಾದ ಮತ್ತು ಪವಿತ್ರವಾದ ದೇವಾಲಯವು ಉದ್ಘಾಟನೆಯಾಗಿದ್ದು, ಇದೊರಂದಿಗೆ ಯುಎಇ ಮಾನವ ಇತಿಹಾಸದಲ್ಲಿ ಸುವರ್ಣ ಅಧ್ಯಾಯವನ್ನು ಬರೆದಿದೆ. ವರ್ಷಗಳ ಪರಿಶ್ರಮದಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ ಮತ್ತು ಬಹುಕಾಲದ ಕನಸು ನನಸಾಗಿದೆ. ಭಗವಾನ್ ಸ್ವಾಮಿನಾರಾಯಣ ಅವರ ಆಶೀರ್ವಾದವೂ ಇದೆ.
ಭಾರತದ ಮೇಲಿನ ನಿಮ್ಮ ಪ್ರೀತಿ ಮತ್ತು ಯುಎಇ ಉಜ್ವಲ ಭವಿಷ್ಯಕ್ಕಾಗಿ ನಿಮ್ಮ ದೃಷ್ಟಿಯ ಪ್ರತಿಬಿಂಬ ಎಂದು ನಾನು ಇಲ್ಲಿ ಬಿಎಪಿಎಸ್ ಮಂದಿರದ ನಿರ್ಮಾಣವನ್ನು ಪರಿಗಣಿಸುತ್ತೇನೆ. ನಿಮ್ಮ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಮೊದಲ ಸಭೆಯ ಸಮಯದಲ್ಲಿ, ನಾನು ನಿಮಗಾಗಿ ಒಂದು ಸರಳ ವಿನಂತಿಯನ್ನು ಮಾಡಿದೆ. ಅದನ್ನು ಈಡೇರಿಸಲು ನೀವು ತ್ವರಿತ ನಿರ್ಧಾರವನ್ನು ತೆಗೆದುಕೊಂಡಿದ್ದೀರಿ, ‘ಯಾವುದೇ ಭೂಮಿಯ ಮೇಲೆ ನಿಮ್ಮ ಬೆರಳು ಹಾಕಿ, ನೀವು ಅದನ್ನು ಪಡೆಯುತ್ತೀರಿ’ ಎಂದು ನನಗೆ ಹೇಳಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷರ ಸಹಾಯವನ್ನು ನೆನೆದರು. ಅಷ್ಟೇ ಅಲ್ಲದೇ, ಅವರಿಗೆ ಗೌರವ ಸೂಚಿಸಲು ನೆರದಿದ್ದ ಭಾರತೀಯ ಸಮುದಾಯದ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಸೂಚಿಸಿದರು.