ಮಳೆಗಾಲದ ಆರಂಭದಿಂದಲೇ ನಾವು ವಿವಿಧ ಬಗೆಯ ಸೊಪ್ಪುಗಳನ್ನು ಬಳಸಬಹುದು. ನೈಸರ್ಗಿಕವಾಗಿ ಹಾಗೂ ಋತುಮಾನಗಳಲ್ಲಿ ಸಿಗವುವ ಸೊಪ್ಪು, ತರಕಾರಿ ಹಾಗೂ ಹಣ್ಣುಗಳು ನಮ್ಮ ಆರೋಗ್ಯಕ್ಕೆ ವಿಶೇಷ ರಕ್ಷಣೆ ನೀಡುತ್ತವೆ. ಅವುಗಳಲ್ಲಿ ಇರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಮಹತ್ತರವಾದ ಆರೋಗ್ಯವನ್ನು ತಂದುಕೊಡುತ್ತವೆ. ಸೊಪ್ಪುಗಳ ವಿಚಾರಕ್ಕೆ ಬಂದರೆ ಸಾಕಷ್ಟು ವಿವಿಧತೆಯನ್ನು ಕಾಣಬಹುದು. ಅಂತಹ ಸೊಪ್ಪುಗಳಲ್ಲಿ ಸೋರ್ರೆಲ್ ಸೊಪ್ಪು ಸಹ ಒಂದು.
ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕ ಹೌದು, ಸೋರ್ರೆಲ್ ಸೊಪ್ಪು ತಿನ್ನುವುದರಿಂದ ರಕ್ತದ ಒತ್ತಡವನ್ನ ನಿಯಮಿತವಾಗಿ ಕಡಿಮೆ ಮಾಡಬಹುದು. ಸಮೃದ್ಧವಾದ ಉತ್ಕರ್ಷಣ ನಿರೋಧಕ ಗುಣವು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ಗಳನ್ನು ಮತ್ತು ಟ್ರೈಗ್ಲಿಸರೈಡ್ಗಳ ಮಟ್ಟವನ್ನು ಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂತಹ ಶಕ್ತಿಯು ಈ ಸೊಪ್ಪಿನಲ್ಲಿ ಇರುವುದರಿಂದ ಕೊಲೆಸ್ಟ್ರಾಲ್, ರಕ್ತದೊತ್ತಡದ ಸಮಸ್ಯೆ ಇರುವ ವ್ಯಕ್ತಿಗಳು ಸೇವಿಸಬಹುದು. ಇದು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿ ಇರುವಂತೆ ಮಾಡುತ್ತದೆ.