ವಿಧಾನಪರಿಷತ್: ಮುಖ್ಯಮಂತ್ರಿ ಸಿದ್ದರಾಮಯ್ಯನವರು ʼಗೂಂಡಾʼ ಪದ ಬಳಸಿದ್ದು ಅಪಶಬ್ದವಾಗಿದ್ದು ಈ ಪದ ಬಳಕೆಯ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಪಕ್ಷದ ಸದಸ್ಯರನ್ನು ಗೂಂಡಾಗಳಿಗೆ ಹೋಲಿಸಿ, ಥೂ, ಛಿ ಎಂದು ಬೆದರಿಸಲು ಪ್ರಯತ್ನಿಸಿದರು ಎಂದು ಹೇಳಿಕೆ ನೀಡಿದ್ದಾರೆ. ಇದು ಸದನಕ್ಕೆ ಸಿಎಂ ಅಪಮಾನಿಸಿದ್ದಾರೆ ಸರ್ಕಾರ ಹೀಗೆ ಮುಂದುವರೆದರೆ ನಾವು ಬಾಯ್ಕಾಟ್ ಮಾಡುತ್ತೇವೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಸಭಾಪತಿಗಳು ಕೂಡ ಸರಿಯಾದ ರೀತಿಯಲ್ಲಿ ಇದಕ್ಕೆ ಸಹಕಾರ ನೀಡಲಿಲ್ಲ. ಅಪ ಶಬ್ದ ಬಳಕೆಗೆ ಕ್ಷಮೆಯಾಚಿಸಬೇಕೆಂದು ಕೋರಿಕೊಂಡಾಗ, ಅದನ್ನು ಪರಿಗಣಿಸಿದೆ, ಅದೇ ರೀತಿ ವರ್ತನೆಯನ್ನು ಮುಂದುವರಿಸಿದರು. ಈ ಕಾರಣದಿಂದಾಗಿ ಸಭಾತ್ಯಾಗ ಮಾಡಲಾಗಿದೆ ಎಂದು ಪರಿಷತ್ ನಲ್ಲಿ ಶರವಣ ಅವರು ಹೇಳಿಕೆ ನೀಡಿದರು.