ರಾಜ್ಯ ಬಜೆಟ್ ನಲ್ಲಿ ಕೃಷಿಗೆ ವಿಶೇಷ ಆಧ್ಯತೆ, ಕರ್ನಾಟಕ ರೈತ ಸಮೃದ್ಧಿ ಯೋಜನೆ
ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ:-
ರೈತ ಕ್ಷೇತ್ರವನ್ನು ಸುಸ್ಥಿರ, ಲಾಭದಾಯಕ ವಾಗಿಸುವುದು ಸರ್ಕಾರದ ಆದ್ಯತೆಯಾಗಿದ್ದು, ವಿವಿಧ ರೈತ ಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಉತ್ತೇಜನಕ್ಕೆ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ
ಕೃಷಿ, ಪಶು ಸಂಗೋಪನೆ, ತೋಟಗಾರಿಕೆ, ಹೈನುಗಾರಿಕೆಗಳನ್ನೊಳಗೊಂಡ ಸಮಗೃ ಕೃಷಿ ಮೂಲಕ ಆದಾಯದಲ್ಲಿ ಸುಸ್ಥಿರಕ್ಕೆ ಕ್ರಮ
ಮಣ್ಣಿನ ಸತ್ವ ಹೆಚ್ಚಳ ಕೃಷಿ ಪದ್ಧತಿ ಮತ್ತು ತಂತ್ರಜ್ಞಾನವನ್ನು ಕುರಿತು ರೈತರಿಗೆ ಅರಿವು, ಕೃಷಿ ಉತ್ಪನ್ನಗಳ ಸಂರಕ್ಷಣೆ ಮತ್ತು ಅರುವು ಹಾಗೂ ಸೂಕ್ತ ಮಾರುಕಟ್ಟೆ ಸಂರ್ಕ ಒದಗಿಸುವುದು ಇದರ ಉದ್ದೇಶ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ:-
ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಸಹಕಾರ ಪಶು ಸಂಗೋಪನೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ
ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂಪಾಯಿ ಮೀಸಲು:-
ಪ್ರತ್ಯೇಕ ಆಹಾರ ಸಂಸ್ಕರಣೆ ನರ್ದೇಶನಾಲಯ ರಚನೆ
ಆಹಾರ ಸಂಸ್ಕರಣೆ ಮತ್ತು ರಫ್ತು ಉತ್ತೇಜನದ ಮುಖ್ಯ ಉದ್ದೇಶದಿಂದ ಕೃಷಿ ಇಲಾಖೆಯ ಅಧೀನದಲ್ಲಿ ಪ್ರತ್ಯೇಕ ಆಹಾರ ಸಂಸ್ಕರಣಾ ಆಯುಕ್ತಾಲಯ ರಚನೆ.
ಇದರ ಮೂಲಕ ವಿವಿಧ ಇಲಾಖೆಗಳ ಅಡಿಯಲ್ಲಿ ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಒಗ್ಗೂಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸುವುದು.
ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಪ್ತು ಉತ್ತೇಜನಕ್ಕೆ ರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಪ್ತು ನಿಗಮ ನಿಯಮಿತ (ಕೆಫೆಕ್) ಸಂಸ್ಥೆ ಬಲಪಡಿಸಲು 80 ಕೋಟಿ ರೂ ಒದಗಿಸಲಾಗುವುದು.
ಆಹಾರ ಪಾರ್ಕ್ ಗಳ ಸ್ಥಾಪನೆ:-
ರಾಜ್ಯದ ವಿಮಾನ ನಿಲ್ದಾಣಗಳ ಬಳಿ ಸರ್ವಜನಿಕ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್ ಗಳ ಸ್ಥಾಪನೆ. ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದ ಸೊಗಾನೆ, ವಿಜಯಪುರದ ಇಟ್ಟಿಂಗಿಹಾಳ ಹಾಗು ಬೆಂಗಳೂರು ಬಳಿಯ ಪೂಜೆನಹಳ್ಳಿಯಲ್ಲಿ ಸ್ಥಾಪನೆ.
ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ:-
ನಶಿಸಿ ಹೋಗುತ್ತಿರುವ ಸ್ಥಳಿಯ ಬೆಳೆಗಳ ತಳಿಗಳ ಸಂಗ್ರಹಣೆಗೆ ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ
ಕೃಷಿಕ ಹಾಗೂ ರೈತ ಮಹಿಳೆಯರ ಆರ್ಥಿಕ ಮತ್ತ ತಾಂತ್ರಿಕ ಸಬಲೀಕರಣಕ್ಕೆ ವಿಶೇಷ ಯೋಜನೆಗಳ ಜಾರಿ.
ನಮ್ಮ ಮಿಲೆಟ್:-
ನಮ್ಮ ಮಿಲೇಟ್ ಎಂಬ ಹೊಸ ಯೋಜನೆ ಪ್ರಾರಂಭ. ಸಿರಿಧಾನ್ಯ ಕೈಗೆಟುಕುವ ದರದಲ್ಲಿ ಮಾರಾಟ ಮಾಡಲು ಕ್ರಮ
5 ಸಾವಿರ ಸಣ್ಣ ಸರೋವರಗಳ ನರ್ಮಾಣ:-
ರಾಜ್ಯದ ಬರಪೀಡಿತ ಮತ್ತು ಮಳೆಯಾಶ್ರೀತ ಪ್ರದೇಶಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಗಾಗಿ ಪ್ರತಿ ರ್ಷ ಸಾವಿರದಂತೆ ನರೇಗಾ ಯೋಜನೆಯಡಿ ಒಟ್ಟು 5 ಸಾವಿರ ಸಣ್ಣ ಸರೋವರ ನರ್ಮಾಣಕ್ಕೆ ಕ್ರಮ
ಜ್ಞಾನ ಕೇಂದ್ರ ಅಭಿವೃದ್ಧಿ:-
ಬೆಂಗಳೂರಿನ ಕೃಷಿ ಇಲಾಖೆಯ ಆರ್.ಕೆ ಶಾಲಾ ಕೃಷಿ ಕ್ಷೇತ್ರವನ್ನು ಕೃಷಿಗೆ ಸಂಬಂದಿಸಿದ ತಾಂತ್ರಿಕತೆಗಳನ್ನು ಪಸರಿಸುವ ಜ್ಞಾನ ಕೇಂದ್ರವನ್ನಾಗಿ ಖಾಸಗಿ ಸರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು
e-sap ತಂತ್ರಾಂಶ ವಿಸ್ತರಣೆ:-
ರೈತರಿಗೆ ಕೀಟ, ರೋಗ ಮತ್ತು ಪೊಷಕಾಂಶ ನಿರ್ವಣೆ ಸಲಹೆ ನೀಡಲು ರಾಯಚೂರು ಕೃಷಿ ವಿವಿ ಅಭಿವೃದ್ಧಿ ಪಡಿಸಿರುವ e-sap ತಂತ್ರಾಂಶದ ಸೌಲಭ್ಯಗಳನ್ನು ಎಲ್ಲಾ ರೈತರಿಗೂ ಪರಿಚಯಿಸಲು ಕ್ರಮ
ದತ್ತಾಂಶ ಅಭಿವೃದ್ಧಿ:-
ಕೃಷಿಯಲ್ಲಿ ಉಪಗ್ರಹ ಚಿತ್ರ, ಸೆನ್ಸಾರ್ ಗಳ ಬಳಕೆ ಮತ್ತು ಮಿಷಿನ್ ಲರ್ನಿಂಗ್ ನಂತಹ ಅತ್ಯಾಧುನಿಕ ತಂತ್ರಜ್ಞಾನ ಗಳನ್ನು ಆಧಾರಿಸಿ ಉತ್ಪಾದಕತೆ ಮುನ್ಸೂಚನೆಯನ್ನು ಮಾಡಲು ದತ್ತಾಂಶ ವನ್ನು ಅಭಿವೃದ್ಧಿ ಪಡಿಸಲಾಗುವುದು..
ಸ್ಟಾರ್ಟ್ ಅಫ್ ಗಳಿಗೆ ಉತ್ತೇಜನ:-
ರೈತ ಉತ್ಪನ್ನ ಸಂಸ್ಥೆಗಳನ್ನು (ಎಫ್ .ಪಿ.ಓ) ಇನ್ನಷ್ಟು ಸದೃಢ ಮತ್ತು ಸುಸ್ಥಿರಗೊಳಿಸಲು ಕೃಷಿ ವಲಯದ ಸ್ಟಾರ್ಟ್ ಅಫ್ ಗಳನ್ನು ಉತ್ತೇಜಿಸಲು ಕ್ರಮ.
ಮಂಡ್ಯ ವಿಸಿ ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆಗೆ ಪರಿಶೀಲನೆ ಸಮಿತಿ ರಚನೆ:-
ಮಂಡ್ಯ ಜಿಲ್ಲೆಯ ವಿ.ಸಿ.ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆ ಕುರಿತು ಪರಿಶೀಲಿಸಲು ಸಮಿತಿ ರಚನೆ..