ಆಂಧ್ರಪ್ರದೇಶ :- ಇಲ್ಲಿನ ತಿರುಪತಿಯಲ್ಲಿರುವ ಝೂಲಾಜಿಕಲ್ ಪಾರ್ಕ್ನಲ್ಲಿ ಸಿಂಹದ ಜತೆ ಸೆಲ್ಫಿ ತೆಗೆಯಲು ಹೋದ ವ್ಯಕ್ತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡ ಘಟನೆ ಜರುಗಿದೆ
ಪ್ರಹ್ಲಾದ್ ಗುಲ್ಜಾರ್ ಸಿಂಹಗಳಿಗೆ ಸೆಲ್ಫಿ ತೆಗೆದುಕೊಳ್ಳಲು ಸಿಂಹಕ್ಕೆ ಮೀಸಲಾದ ಆವರಣವನ್ನು ಪ್ರವೇಶಿಸಿದ್ದಾರೆ. ಈ ಆವರಣವು ಮೃಗಾಲಯದ ಅಧಿಕಾರಿಗಳು ಪ್ರಾಣಿಗಳಿಗೆ ಆಹಾರವನ್ನು ಒದಗಿಸುವ ಸ್ಥಳವಾಗಿತ್ತು, ಸಿಂಹದ ಬಳಿ ಹೋಗಲು ತಲುಪಲು ಗುಲ್ಜಾರ್ ಕೊನೆಯ ಗೇಟ್ ಕೂಡ ದಾಟಿದ್ದರು. ಸಿಂಹವು ಅವರ ಮೇಲೆ ದಾಳಿ ದಾಳಿ ನಡೆಸಿ ಕೊಂದು ಹಾಕಿದೆ.
ಪ್ರಾಣ ಉಳಿಸಿಕೊಳ್ಳಲು ಪಕ್ಕದಲ್ಲಿದ್ದ ಮರವನ್ನು ಹತ್ತಿದ್ದರು ಆದರೆ ಭಯದಿಂದ ಮರದಿಂದ ಬಿದ್ದು ಕೆಲವೇ ನಿಮಿಷಗಳಲ್ಲಿ ಸಿಂಹ ದಾಳಿ ಮಾಡಿತು. ಸಿಂಹ ಆತನನ್ನು ಶರ್ಟ್ ಮತ್ತು ಪ್ಯಾಂಟ್ ಸಹಾಯದಿಂದ ಮೇಲಕ್ಕೆಳೆದು ಕುತ್ತಿಗೆಗೆ ದಾಳಿ ಮಾಡಿತ್ತು. ಘಟನೆಯನ್ನು ನೋಡಿದ ನಂತರ ಮೃಗಾಲಯದಲ್ಲಿದ್ದ ಅಧಿಕಾರಿಗಳು ಭಯಗೊಂಡರು.
ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ