ಬೆಂಗಳೂರು ದಕ್ಷಿಣ ವಿಭಾಗದ ಸಂಚಾರ ಪೊಲೀಸರು (Police) ವಿಶೇಷ ಕಾರ್ಯಚರಣೆ ನಡೆಸಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ವಾಹನಗಳನ್ನು ಮತ್ತು 50 ಸಾವಿರಕ್ಕೂ ಹೆಚ್ಚು ದಂಡವಿರುವ ವಾಹನಗಳನ್ನು (Vechicles) ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿ ದಕ್ಷಿಣ ವಿಭಾಗ ಸಂಚಾರಿ ಪೊಲೀಸರು ಕಳೆದ ವಾರದಿಂದ ವಿಶೇಷ ಡ್ರೈವ್ ನಡೆಸಿ 50 ಸಾವಿರ ಮೇಲ್ಪಟ್ಟ ದಂಡವಿರುವ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ವಶ ಪಡಿಸಿಕೊಂಡಿರುವ 85 ಬೈಕ್ಗಳು ಮತ್ತು ಒಂದು ಕಾರಿನ ಮೇಲೆ ಇರುವ ಒಟ್ಟು ದಂಡ ಬರೋಬ್ಬರಿ 1,07,45,000 ರೂ. 85 ವಾಹನಗಳ ಮೇಲೆ ಬರೋಬ್ಬರಿ 10,210 ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದೆ. ಸದ್ಯ ವಾಹನಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಸಿಟಿ 100 ಬೈಕ್ನ ಯುವಕನೊಬ್ಬ 1.40 ಲಕ್ಷ ದಂಡವಿದ್ದರೂ ಹಾಗೇ ಬೈಕ್ ಓಡಿಸುತ್ತಿದ್ದ. ಪ್ರತೀ ದಿನ ಹೆಲ್ಮೆಟ್ ಇಲ್ಲದೇ ಆಫೀಸ್ಗೆ ಬೈಕ್ ಓಡಿಸಿಕೊಂಡು ಹೋಗುತ್ತಿದ್ದನು. ಜೊತೆಗೆ ದಿನವೂ ಸಂಚಾರ ನಿಯಮಗಳ ಉಲ್ಲಂಘನೆ ಮಾಡುತ್ತಿದ್ದ. ನಗರದಲ್ಲಿರುವ ಹೈ ರೆಸ್ಯೂಲೇಷನ್ ಕ್ಯಾಮರಾ ಪದೇ ಪದೇ ರೂಲ್ಸ್ ಬ್ರೇಕ್ ಮಾಡಿದ್ದ ಸವಾರನ ಫೋಟೋ ತೆಗೆದ ಹಿನ್ನೆಲೆ ಯುವಕನ ಹುಚ್ಚಾಟ ಬೆಳಕಿಗೆ ಬಂದಿದೆ. ಆತನ ಸಿಟಿ-100 ಬೈಕ್ ಮೇಲೆ ಬರೋಬ್ಬರಿ 284 ಕೇಸ್ಗಳು ದಾಖಾಲಾಗಿದೆ. ಕಳೆದ 2020 ರಿಂದ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದ