ಏಕಾಏಕಿ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭದ್ರತೆ ಹೆಚ್ಚಳವಾಗಿದ್ದು, ಕಳೆದ ಮೂರು ದಿನದಿಂದ ಖರ್ಗೆಗೆ Z+ ಸೆಕ್ಯುರಿಟಿ ನೀಡಲಾಗಿದೆ.
ಸ್ಟೇಟ್ ಸೆಕ್ಯುರಿಟಿ ಜೊತೆಗೆ ಸಿಆರ್ ಪಿಎಫ್ Z+ ಸಕ್ಯೂರಿಟಿ ಸಹ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ 8 ಜನ ಸಿಆರ್ಪಿಎಫ್ (CRPF) ಗನ್ ಮ್ಯಾನ್ ಗಳ ನಿಯೋಜಿಸಲಾಗಿದೆ.
ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಆ ಕಾರಣಕ್ಕೆ ಕಳೆದ ಮೂರು ದಿನದಿಂದ Z+ ಸೆಕ್ಯುರಿಟಿ ನೀಡಲಾಗಿದೆ. ಬೆಂಗಳೂರು ನಿವಾಸಕ್ಕೂ z+ ಸೆಕ್ಯುರಿಟಿ ನಿಯೋಜಿಸಲಾಗಿದೆ.