ದೇಶದ ಸಂಪತ್ತಿನ ಮೇಲೆ ದಲಿತರ, ಬಡವರ, ಆದಿವಾಸಿಗಳಿಗೆ ಹಕ್ಕಿದೆ. ಕೇವಲ ಅಲ್ಪ ಸಂಖ್ಯಾತರಿಗೆ ಇಲ್ಲ. ರಾಮಮಂದಿರದ ಪ್ರಾಣ ಪ್ರತಿಷ್ಟಾಪನೆಗೆ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ತುಷ್ಟಿಕರಣ ರಾಜಕಾರಣಕ್ಕಾಗಿ ಪ್ರಾಣ ಪ್ರತಿಷ್ಠಾಪನೆಗೆ ಅವರು ಬರಲಿಲ್ಲ. ಆಹ್ವಾನವನ್ನು ತಿರಸ್ಕರಿಸಿ ದೇಶ ಮಹಾನ್ ಆಗುವ ಪ್ರಕ್ರಿಯಿಂದ ದೂರ ಉಳಿದಿದ್ದಾರೆ. ಇದನ್ನು ದೇಶದ ಜನ ನೋಡುತ್ತಿದ್ದಾರೆ. ಆದ್ರೆ ಬಿಜೆಪಿ ತುಷ್ಟಿಕರಣ ನಂಬಲ್ಲ. ರಾಮಮಂದಿರ ನಿರ್ಮಾಣದ ಸಂಪೂರ್ಣ ಯಶಸ್ಸು ಮೋದಿಯವರಿಗೆ ಸಲ್ಲುತ್ತೆ ಎಂದು ಹಾಡಿಹೊಗಳಿದರು.
ಮೋದಿಯಿಂದ ಸಮೃದ್ಧ ಭಾರತ ನಿರ್ಮಾಣ:
ಪ್ರಥಮ ಬಾರಿಗೆ ಪ್ರಧಾನಿ ಮೋದಿಯವರು ದೇಶವನ್ನು ಗುಲಾಮಗಿರಿಯ ಸಂಕೇತಗಳಿಂದ ಮುಕ್ತಗೊಳಿಸಬೇಕೆಂದು ಕರೆ ನೀಡಿದರು. ಆದ್ರೆ ಕಾಂಗ್ರೆಸ್ ಮತ್ತು ಐಎನ್ಡಿಐಎ ಮೈತ್ರಿಕೂಟದ ಜನ ದೇಶವನ್ನು ಗುಲಾಮಗಿರಿ ಸಂಕೇತಗಳಿಂದ ಮುಕ್ತಗೊಳಿಸಬೇಕು ಎಂಬುದನ್ನ ಊಹಿಸಿಯೂ ಇರಲಿಲ್ಲ. ಮೋದಿ ಈ ದೇಶವನ್ನು ಭಯೋತ್ಪಾದನೆ, ಉಗ್ರವಾದ ಮತ್ತು ನಕ್ಸಲಿಸಂನಿಂದ ಮುಕ್ತಿಗೊಳಿಸಿ, ಶಾಂತಿ, ಸಮೃದ್ಧ ಭಾರತ ನಿರ್ಮಾಣ ಮಾಡಿದ್ದಾರೆ.
ಕುಟುಂಬಕ್ಕಾಗಿ ಯೋಚಿಸೋರಿಂದ ಬಡವರ ಕಲ್ಯಾಣ ಆಗುತ್ತಾ?
ಮೋದಿ ಅವರು ಭಾರತವನ್ನು ಸ್ವಾವಲಂಬಿ ಮಾಡುವ ಗುರಿ ಹೊಂದಿದ್ದಾರೆ. ಆದ್ರೆ ಸೋನಿಯಾ ಗಾಂಧಿ ಅವರ ಗುರಿ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು. ಪವಾರ್ ಸಾಹೇಬ್ ಅವರ ಗುರಿ ತಮ್ಮ ಮಗಳನ್ನು ಸಿಎಂ ಮಾಡುವುದು, ಮಮತಾ ಬ್ಯಾನರ್ಜಿ ಅವರ ಸೋದರಳಿಯನನ್ನು ಸಿಎಂ ಮಾಡುವುದಾಗಿದೆ. ಸ್ಟಾಲಿನ್, ಲಾಲು ಪ್ರಸಾದ್ ಯಾದವ್, ಉದ್ಧವ್ ಠಾಕ್ರೆ, ಮುಲಾಯಂ ಸಿಂಗ್ ಯಾದವ್ ತಮ್ಮ ಮಕ್ಕಳನ್ನು ಸಿಎಂ ಮಾಡುವ ಗುರಿ ಹೊಂದಿದ್ದಾರೆ. ಕುಟುಂಬಕ್ಕಾಗಿ ಅಧಿಕಾರ ಹಿಡಿಯುವ ಗುರಿ ಹೊಂದಿರುವವರು ಬಡವರ ಕಲ್ಯಾಣದ ಬಗ್ಗೆ ಯೋಚಿಸುತ್ತಾರಾ? ಎಂದು ಶಾ ಕೆಂಡಾಮಂಡಲವಾಗಿದ್ದಾರೆ.