ಮನೆಯಲ್ಲೇ ಇರುವ ಕೆಲವು ತರಕಾರಿಗಳನ್ನು ಬಳಸಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಬಹುದು. ಹಸಿಶುಂಠಿ ಹಾಗೂ ನಿಂಬೆ ಬೆರೆಸಿ ತಯಾರಿಸಿದ ಚಹಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಕ್ರಮೇಣ ದೇಹ ತೂಕ ಇಳಿಕೆಗೂ ಕಾರಣವಾಗುತ್ತದೆ.
ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಒಂದಿಂಚು ಗಾತ್ರದ ಶುಂಠಿಯನ್ನು ಜಜ್ಜಿ ಇಲ್ಲವೇ ತುರಿದು ಸೇರಿಸಿ. ಬಳಿಕ ಸೋಸಿ ನಿಂಬೆರಸ ಬೆರೆಸಿ. ಸಿಹಿ ಬೇಕಿದ್ದರೆ ಜೇನುತುಪ್ಪ ಬೆರೆಸಿ ಕುಡಿಯಬಹುದು.
ಬೆಳಿಗ್ಗೆ ಎದ್ದ ತಕ್ಷಣ ಅರ್ಧ ಇಂಚು ಗಾತ್ರದ ಶುಂಠಿ ತುಂಡನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿಯಿರಿ. ಇದರಿಂದಲೂ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಲಿದೆ.
ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಪೇಸ್ಟ್ ಮಾಡಿ ಒಂದು ಕಪ್ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಬಿಸಿ ಇರುವಂತೆಯೇ ಕುಡಿಯುವುದರಿಂದಲೂ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದು ರಕ್ತನಾಳಗಳನ್ನು ತೆರೆಯಲು ನೆರವಾಗುತ್ತವೆ.