ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಚಿವರು ಹಿಂದೇಟು ಹಾಕ್ತಿದ್ದಾರೆ.ಕಾಂಗ್ರೆಸ್ ಡಬಲ್ ಡಿಜೆಟ್ ದಾಟಬೇಕಾದರೆ,ಸಚಿವರ ಸ್ಪರ್ಧೆ ಅನಿವಾರ್ಯ ಎಂದು ಕೆಪಿಸಿಸಿ ನಡೆಸಿದ ಸರ್ವೇಯಲ್ಲಿ ಬಹಿರಂಗವಾಗಿತ್ತು.ಕೆಪಿಸಿಸಿ ಅಧ್ಯಕ್ಷರ ಕೂಡ ಸಮಯ ಬಂದಾಗ ಸಚಿವರು ಸ್ಪರ್ಧೆ ಮಾಡಬೇಕೆಂದು ಹೇಳಿದ್ರು.ಆದ್ರೆ,ಕೆಲ ಸಚಿವರು ಲೋಕ ಅಖಾಡಕ್ಕೆ ಧುಮುಕಲು ಹಿಂದೇಟು ಹಾಕ್ತಿದ್ದಾರೆ. ಯೆಸ್, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರ ಹಿಡಿಯಲು ಎಐಸಿಸಿ ಎಲ್ಲ ಸಿದ್ಧತೆ ನಡೆಸುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರೋದ್ರಿಂದ ಟಾರ್ಗೆಟ್ 20 ನೀಡಿದೆ.28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬರುವಂತೆ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ದೊರೆಗಳು ಕಟಾಜ್ಞೆ ಮಾಡಿದ್ದಾರೆ.28 ಲೋಕಸಭಾ ಕ್ಷೇತ್ರಗಳ ಪೈಕಿ ಸುಮಾರು 10 ರಿಂದ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಪ್ರಬಲವಾದ ಕಟ್ಟಾಳುಗಳು ಸಿಗುತ್ತಿಲ್ಲ.ಇದು ಕೆಪಿಸಿಸಿಗೆ ದೊಡ್ಡ ತಲೆನೋವಾಗಿತ್ತು.ಹೀಗಾಗಿಯೇ,ಕೆಲ ಸಚಿವರಿಗೆ ಲೋಕ ಟಿಕೆಟ್ ನೀಡುವ ಬಗ್ಗೆ ಚರ್ಚೆಯಾಗಿದೆ.
ಆದ್ರೆ, ಕೆಲ ಸಚಿವರು ಲೋಕ ಅಖಾಡಕ್ಕೆ ಧುಮುಕಲು ಹಿಂದೇಟು ಹಾಕಿದ್ದಾರೆ.ಇಂದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ನಾನು ಲೋಕಸಭೆಗೆ ಸ್ಪರ್ಧಿಸಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಮಹಾದೇವಪ್ಪ ನೇರವಾಗಿ ಹೇಳಿದ್ದಾರೆ. ಇನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸಚಿವ ಮಹಾದೇವಪ್ಪ ಸ್ಪರ್ಧೆ ಮಾಡುವಂತೆ ಸಿಎಂ,ಡಿಸಿಎಂ ಒತ್ತಡ ಹಾಕುತ್ತಿದ್ದಾರೆ.ಈ ಹಿನ್ನಲೆಯಲ್ಲಿ ನೇರವಾಗಿಯೇ ಅಸಮಧಾನ ವ್ಯಕ್ತಪಡಿಸಿರುವ ಸಚಿವ ಮಹಾದೇವಪ್ಪ, ಸಿಎಂ,ಡಿಸಿಎಂ ನಂಬರ್ 1 ಪಾರ್ಲಿಮೆಂಟ್ ಗೆ.ಅವರಿಬ್ಬರು ಗುಡ್ ಕ್ಯಾಂಡಿಡೇಟ್ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.ನಾನು ಪಕ್ಷಕ್ಕೆ ತುಂಬಾ ತ್ಯಾಗ ಮಾಡಿದ್ದೇನೆ ಎಂದು ಇಂದು ಅಕ್ಷರಶಃ ತಾಳ್ಮೆ ಕಳೆದುಕೊಂಡಿದ್ದರು.
ಲೋಕ ಅಖಾಡಕ್ಕೆ ಸಂಭಾವನೀಯ ಸಚಿವರು..!?
ಸತೀಶ್ ಜಾರಕಿಹೊಳಿ,ಬೆಳಗಾವಿ ಲೋಕಸಭಾ ಕ್ಷೇತ್ರ
ಎಚ್.ಸಿ.ಮಹಾದೇವಪ್ಪ,ಚಾಮರಾಜನಗರ ಕ್ಷೇತ್ರ
ನಾಗೇಂದ್ರ,ಬಳ್ಳಾರಿ ಲೋಕಸಭಾ ಕ್ಷೇತ್ರ
ಕೆ.ಎಚ್.ಮುನಿಯಪ್ಪ,ಕೋಲಾರ ಲೋಕಸಭಾ ಕ್ಷೇತ್ರ
ಕೃಷ್ಣ ಭೈರೇಗೌಡ,ಬೆಂಗಳೂರು ಉತ್ತರ
ಎಚ್.ಕೆ.ಪಾಟೀಲ್,ಹಾವೇರಿ ಲೋಕಸಭಾ ಕ್ಷೇತ್ರ
ಸಂತೋಷ್ ಲಾಡ್,ಧಾರವಾಡ ಲೋಕಸಭಾ ಕ್ಷೇತ್ರ
ಕೆ.ಜೆ.ಜಾರ್ಜ್,ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ
ಇನ್ನು ಬಹುತೇಕ ಸಚಿವರು ನನಗೆ ಲೋಕಸಭೆ ಟಿಕೆಟ್ ಬೇಡ,ನನ್ನ ಕುಟುಂಬ ಸದಸ್ಯರಿಗೆ ನೀಡಿ ಎಂದು ಪದೇ ಪದೇ ಹೇಳಿಕೆ ನೀಡ್ತಿದ್ದಾರೆ.ಆದ್ರೆ,ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಡಬಲ್ ಡಿಜಿಟ್ ನಂಬರ್ ದಾಟಬೇಕಾದರೆ, ಸಚಿವರು ಸ್ಪರ್ಧೆ ಮಾಡಲೇಬೇಕೆಂದು ಎಂದು ಹೈಕಮಾಂಡ್ ಸೂಚನೆ ನೀಡಿದ್ದಾರೆ. ಒಟ್ಟಾರೆ,ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಸಚಿವರು ನಿರಾಸಕ್ತಿ ತೋರಿದ್ದಾರೆ.ಅಂತಿಮ ಕ್ಷಣದಲ್ಲಿ ಹೈಕಮಾಂಡ್ ಸಚಿವರು ಸ್ಪರ್ಧೆ ಗೆ ಕಟ್ಟಪ್ಪಣೆ ಮಾಡಿದ್ರೆ,ಕೆಲ ಸಚಿವರು ಅನಿವಾರ್ಯವಾಗಿ ಲೋಕ ಸಮರವನ್ನ ಎದುರಿಸಬೇಕಾಗುತ್ತದೆ.