ಬೆಂಗಳೂರು: ರಾಷ್ಟ್ರ ರಾಜಧಾನಿ ನಂತ್ರ ರಾಜ್ಯದಲ್ಲೂ ವಿವಿಧ ಬೇಡಿಕೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ರು. ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರೈತರು ಪರವಾಗಿಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಕೃಷಿ ಸಚಿವರ ಕಾರಿಗೆ ಹಾಗೂ ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದ್ರು. ಒಂದ್ಕಡೆ ಬೇಕೆ ಬೇಕು ನ್ಯಾಯ ಬೇಕೆಂದು ರೈತರು ಕೂಗಾಟ. ಮತ್ತೊಂದು ಕಡೆ ಕೃಷಿ ಸಚಿವ ಮುಂದೆ ರೈತ ಮಹಿಳೆ ಕಣ್ಣೀರು. ಇನ್ನೊಂದು ಕಡೆ ಕೃಷಿ ಸಚಿವರ ಕಾರಿಗೆ ಹಾಗೂ ಸಿಎಂ ಮನೆಗೆ ಮುತ್ತಿಗೆ ಈ ಎಲ್ಲಾ ದೃಶ್ಯಕಂಡು ಬಂದಿದ್ದು, ನಗರ ಪ್ರೀಡಂ ಪಾಕ್೯ನಲ್ಲಿ..
ಹೌದು ಮುಖ್ಯಮಂತ್ರಿ ಮಂಡಿಸಿದ ಬಜೆಟ್ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ತಿರಸ್ಕರಿಸಿದೆ. ರೈತರು ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ರೈತರ ಪರವಾಗಿ ಬಜೆಟ್ ಮಂಡನೆ ಮಾಡಿಲ್ಲ. ರೈತ ಸಂಘಟನೆಗಳು ಹೋಗಿ ಹಲವಾರು ಬೇಡಿಕೆಗಳನ್ನ ಮನವಿ ಕೊಟ್ರು ಮುಖ್ಯಮಂತ್ರಿಗಳು ಬಜೆಟ್ ಲನಲ್ಲಿ ಸ್ಪಂದಿಸಿಲ್ಲ ಎಂದು ನಗರದ ಪ್ರೀಡಂ ಪಾಕ್೯ನಲ್ಲಿ ವಿಭಿನ್ನ ನಾಟಕ ಮಾಡುವ ಮುಖಾಂತರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು.
ರೈತರ ಪ್ರಮುಖ ಬೇಡಿಕೆ
– ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು
– ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿ
– ಭತ್ತ, ರಾಗಿ, ಜೋಳ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿ
– ಕಿಂಟ್ವಾಲ್ಗೆ ಕನಿಷ್ಠ ₹500 ಹೆಚ್ಚಳ ಮಾಡಬೇಕು
– ಕಬ್ಬು ಬೆಳೆಗೆ ಪ್ರತಿ ಟನ್ಗೆ ₹4ಸಾವಿರ ನಿಗದಿ ಮಾಡಿ
– ಮಹದಾಯಿ ಯೋಜನೆ ಅನುಷ್ಠಾನ ಮಾಡಬೇಕು
– 60 ವರ್ಷದ ಮೇಲ್ಪಟ್ಟ ರೈತರಿಗೆ ಪಿಂಚಣಿ ಜಾರಿ ಮಾಡಿ
– ರೈತರಿಗೆ ಬ್ಯಾಂಕ್ ಅಧಿಕಾರಿಗಳು ಕಿರುಕುಳ
ಇನ್ನೂ ಪ್ರತಿಭಟನೆ ಕಾವು ಜಾಸ್ತಿ ಆಗ್ತಿದಂತೆ ಸ್ಥಳಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಬೇಟಿ ನೀಡಿ ರೈತ ಮನವಿಯನ್ನು ಸ್ವೀಕರಿಸಿ ಭರವಸೆ ನೀಡಿ, ಸಿಎಂ ಜೊತೆ ಚರ್ಚೆ ಮಾಡ್ತೇನೆ ಎಂದು ತಿಳಿಸಿದ್ರು. ಇದೇ ಸಚಿವ ಮುಂದೆ ರೈತ ಮಹಿಳೆ ಕಣ್ಣೀರು ಹಾಕಿದ್ರು. ಇತ್ತ ಸಚಿವರ ಭರವಸೆಗೆ ಬಗ್ಗದೆ ಸಚಿವರ ಕಾರಿಗೆ ಹಾಗೂ ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದ್ರು. ಈ ವೇಳೆ ಪೊಲೀಸರು ರೈತರನ್ನ ವಶಕ್ಕೆ ಪಡೆದುಕೊಂಡ್ರು.. ಒಟ್ನಲ್ಲಿ ನಮ್ಮ ಬೇಡಿಕೆಗಳು ಸರ್ಕಾರ ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟದ ಎಚ್ಚರಿಕೆ ನೀಡಿದ್ರು.