ಬೇಸಿಗೆ ಆರಂಭದಲ್ಲಿಯೇ ರಾಜ್ಯ ರಾಜಧಾನಿಗೆ ಎದುರಾದ ಜಲಕಂಟಕ ನೀರಿಗೆ ಹಾಹಾಕಾರ…ಸಿಲಿಕನ್ ಸಿಟಿ ಮಂದಿಗೆ ಟ್ಯಾಂಕರ್ ನೀರೇ ಆಧಾರ ಟ್ಯಾಂಕರ್ ನೀರಿನ ಮೊರೆ ಹೋದವರಿಗೆ ದರ ಏರಿಕೆಯ ಶಾಕ್
ಟ್ಯಾಂಕರ್ ಮಾಫಿಯಾದ ಹಾವಳಿಯಿಂದ ಏಕಾಏಕಿ ಮೂರ್ನಾಲ್ಕು ಪಟ್ಟು ದರ ಏರಿಕೆ ಟ್ಯಾಂಕರ್ ಮಾಲೀಕರ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮುಂದಾದ ಬಿಬಿಎಂಪಿ ಹಾಗೂ BWSSB ಖಾಸಗಿ ನೀರಿನ ಟ್ಯಾಂಕರ್ ಗೆ ಏಕರೂಪ ದರ ನಿಗದಿ ಮಾಡಲು ನಡೆಯುತ್ತಿದೆ ಸಿದ್ಧತೆ
ಟ್ಯಾಂಕರ್ ಮಾಫಿಯಾಗೆ ಬೀಳುತ್ತಾ ಬ್ರೇಕ್?
ಹಿಂದೆ ಬಿಬಿಎಂಪಿ 5 ಸಾವಿರ ಲೀಟರ್ ಟ್ಯಾಂಕರ್ಗೆ 540 ರೂಪಾಯಿ ಫಿಕ್ಸ್ ಮಾಡಿತ್ತು
12 ಸಾವಿರ ಲೀಟರ್ ನೀರಿನ ಟ್ಯಾಂಕರ್ ಗೆ ₹1,000 ನಿಗದಿ ಮಾಡಿತ್ತು
20 ಸಾವಿರ ಲೀಟರ್ ನೀರಿನ ಟ್ಯಾಂಕರ್ ಗೆ 1500 ನಿಗದಿ ಮಾಡಿತ್ತು
ಆದರೆ ಪಾಲಿಕೆ ನಿಗದಿ ಮಾಡಿರುವ ನೀರಿನ ದರಕ್ಕೆ ಯಾರೂ ಕೂಡ ನೀರು ಪೂರೈಕೆ ಮಾಡ್ತಿಲ್ಲ
ಬೇಸಿಗೆ ಆರಂಭದಲ್ಲೇ ಸಿಲಿಕನ್ ಸಿಟಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ
ಬತ್ತಿ ಹೋದ ಬೋರ್ ವೇಲ್ ಗಳು….ಸರಿಯಾಗಿ ಬಾರದ ಕಾವೇರಿ ನೀರು
ಅನಿವಾರ್ಯವಾಗಿ ಟ್ಯಾಂಕರ್ ನೀರಿನ ಮೊರೆ ಹೋಗಿರುವ ಸಿಟಿ ಮಂದಿ
ನೀರಿಗೆ ಹಾಹಾಕಾರ ಶುರುವಾಗ್ತಿದ್ದಂತೆ ಏಕಾಏಕಿಯಾಗಿ 3-4 ಪಟ್ಟು ದರ ಏರಿಕೆ
ಈಗ ಜನರಿಂದ ಬೇಕಾಬಿಟ್ಟಿಯಾಗಿ ಸುಲಿಗೆ ಮಾಡ್ತಿರುವ ಟ್ಯಾಂಕರ್ ಮಾಲೀಕರು
ಹಲವು ಕಡೆ ₹500-₹600 ಇದ್ದ ಟ್ಯಾಂಕರ್ ನೀರಿನ ದರ ಇದೀಗ ₹1000 ದಿಂದ 4000ಕ್ಕೆರಿದೆ
ಹೆಚ್ಚಿನ ಬೇಡಿಕೆ ಇರೋ ಕಡೆ 5 ಸಾವಿರ ಲೀಟರ್ ನೀರಿಗೆ 1000 ದಿಂದ 6 ಸಾವಿರದವರೆಗೆ ಸುಲಿಗೆ ಮಾಡ್ತಿದ್ದಾರೆ
ಕೆಲವು ಕಡೆ 20 ಸಾವಿರ ಲೀಟರ್ ನೀರಿಗೆ ₹6000ಕ್ಕೂ ಅಧಿಕ ಹಣ ಪಡೆಯುತ್ತಿದ್ದಾರೆ
ಟ್ಯಾಂಕರ್ ಮಾಲೀಕರ ಬೇಕಾಬಿಟ್ಟಿ ಸುಲಿಗೆ ವಿರುದ್ಧ ಜನರಿಂದ ಬಿಬಿಎಂಪಿ ಹಾಗೂ ಜಲಮಂಡಳಿಗೆ ದೂರು
ಸಾಲು-ಸಾಲು ದೂರು ಬಂದ ಹಿನ್ನೆಲೆ ಟ್ಯಾಂಕರ್ ನೀರಿಗೆ ಏಕರೂಪ ದರ ನಿಗದಿಗೆ ಪ್ಲಾನ್
ವರದಿ ನೀಡುವಂತೆ 8 ವಲಯ ಆಯುಕ್ತರಿಗೆ ಪಾಲಿಕೆ ಚೀಫ್ ಕಮಿಷನರ್ ಸೂಚನೆ
ಅತ್ತ ಜಲಮಂಡಳಿಯಿಂದಲೂ ಏಕಾರೂಪ ದರಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ
ಹೆಚ್ಚಿನ ಹಣ ವಸೂಲಿ ಮಾಡಿದ್ರೆ ಅಂತವರ ಟ್ರೇಡ್ ಲೈಸೆನ್ಸ್ ರದ್ದು ಅಸ್ತ್ರ ಪ್ರಯೋಗಕ್ಕೂ ಪ್ಲಾನ್