ಉತ್ತರ ಪ್ರದೇಶ:– ಇಲ್ಲಿನ ಗಾಜಿಯಾಬಾದ್ನಲ್ಲಿ ಪೊಲೀಸ್ ವಾಹನವನ್ನು ಬಳಕೆ ಮಾಡಿಕೊಂಡು ರೀಲ್ಸ್ ಮಾಡಿದ ಯುವಕನನ್ನು ಅರೆಸ್ಟ್ ಮಾಡಲಾಗಿದೆ.
ಇಂದಿರಾಪುರಂ ಪ್ರದೇಶದಲ್ಲಿ ಅಧಿಕಾರಿಗಳು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದಾಗ ಮೊಯಿನ್ ಖಾನ್ ಪೊಲೀಸ್ ವಾಹನ ಬಳಸಿ ವಿಡಿಯೋ ಮಾಡಿದ್ದಾರೆ.
ಯುವಕ ವಾಹನದ ಚಾಲಕನ ಸೀಟಿನಿಂದ ಹೊರಬರುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಹಿನ್ನೆಲೆಯಲ್ಲಿ ಸಂಗೀತವು ಪ್ಲೇ ಆಗುತ್ತಿರುತ್ತದೆ. ಫೆಬ್ರವರಿ 15 ರಂದು ಪೋಸ್ಟ್ ಮಾಡಲಾದ ವೈರಲ್ ರೀಲ್ನ ಎರಡನೇ ಭಾಗವು ಕೈಯಲ್ಲಿ ತಂಪು ಪಾನೀಯದೊಂದಿಗೆ ಮಹೀಂದ್ರಾ ಬೊಲೆರೊದ ಪಕ್ಕದ ಮೆಟ್ಟಿಲಿನಿಂದ ಕೆಳಗೆ ಬರುತ್ತಿರುವುದನ್ನು ಕಾಣಬಹುದು.
ಅಧಿಕಾರಿಗಳ ಪ್ರಕಾರ, ಇಂದಿರಾಪುರಂನ ಕಣವಾಣಿ ಸೇತುವೆಯ ಬಳಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ತೊಡಗಿದ್ದಾಗ, ಖಾಲಿ ಪೊಲೀಸ್ ವಾಹನವನ್ನು ಗಮನಿಸಿದ ಯುವಕರು ಅದನ್ನು ಬಳಸಿ ರೀಲ್ ಮಾಡಲು ನಿರ್ಧರಿಸಿದರು. ವಿಡಿಯೋ ವ್ಯಾಪಕ ಗಮನ ಸೆಳೆದ ನಂತರ ಅಧಿಕಾರಿಗಳು ಕ್ರಮ ಕೈಗೊಂಡು ವ್ಯಕ್ತಿಯನ್ನು ಬಂಧಿಸಿದ್ದಾರೆ.