ಸಿದ್ದರಾಮಯ್ಯ ಬಳಿ ಸ್ಟೇರಿಂಗ್ ಇದೆ. ಆದ್ರೆ, ಬ್ರೇಕ್ ಡಿ.ಕೆ. ಶಿವಕುಮಾರ್ ಬಳಿ ಇದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ಆಡಳಿತವನ್ನ ಬಸ್ಸಿಗೆ ಹೋಲಿಸಿದರು.
ವಿಧಾನ ಪರಿಷತ್ನಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಗಟ್ಟಿಮುಟ್ಟಾದ ಬಸ್ ಇದೆ. 135 ಜನರ ಸುಭದ್ರ ಸರ್ಕಾರ ಇದೆ. ಆಡಳಿತ ಅನುಭವ ಇರುವ ಸಿಎಂ ಬಳಿ ಸ್ಟೇರಿಂಗ್ ಇದೆ. ಆದ್ರೆ ಬ್ರೇಕ್ ಅವರ ಬಳಿ ಮಾತ್ರ ಇಲ್ಲ. ಬ್ರೇಕ್ ಡಿಸಿಎಂ ಬಳಿ ಇದೆ ಎಂದು ಲೇವಡಿ ಮಾಡಿದರು.
ಬಸ್ ಕೊಡುವಾಗ ಹೇಳಿ ಕೊಟ್ಟಿದ್ದಾರೆ. ನಿನಗೆ ಯಾವಾಗ ಬೇಕೋ ಆಗ ಬ್ರೇಕ್ ಹಾಕು ಅಂತ ಡಿಕೆಶಿಗೆ ಹೇಳಿದ್ದಾರೆ. ಅದು ಹೋಗಲಿ ಬೇಕಾದಾಗ ಕ್ಲಚ್ ಹಾಕೋಣ ಅಂತ ಹೇಳಿದ್ರೆ, ಕ್ಲಚ್ ಸಚಿವ ರಾಜಣ್ಣ ಬಳಿ ಇದೆ. ಅದು ಹೋಗಲಿ ಎಕ್ಸಲೇಟರ್ ಕೊಡೋಣ ಅಂದ್ರೆ ಅದು ಅವರ ಬಳಿ ಇಲ್ಲ. ಎಕ್ಸಲೇಟರ್ ಮುನಿಯಪ್ಪ ಬಳಿ, ಅಲ್ಲ ಮೈಸೂರು ಮಹದೇವಪ್ಪ ಬಳಿ ಇದೆ ಎಂದು ಕುಟುಕಿದರು.