ನವದೆಹಲಿ: ಸುದೀರ್ಘ ಅವಧಿಗೆ ಸಿಎಂ ಆಗಿದ್ದೀರಿ, ಪಿಎಂ ಆಗಿದ್ದೀರಿ ಈಗ ಆರಾಮಾಗಿರಿ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದರು. ಇದು ಅವರ ಹಳೆ ರಾಜನೀತಿಯ ಅನುಭವಾಗಿದೆ. ಆದರೆ ನಾವು ರಾಜನೀತಿ ಮಾಡಲು ಬಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ.
ರಾಷ್ಟ್ರೀಯ ಮಹಾ ಅಧಿವೇಶದಲ್ಲಿ ಮಾತನಾಡಿದ ಮೋದಿ, ಸುದೀರ್ಘ ಅವಧಿಗೆ ಸಿಎಂ ಆಗಿದ್ದೀರಿ, ಪಿಎಂ ಆಗಿದ್ದೀರಿ. ಈಗ ಆರಾಮ ಮಾಡಿ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದರು. ಇದು ಅವರ ಹಳೆ ರಾಜನೀತಿಯ ಅನುಭವಾಗಿದೆ. ಆದರೆ ನಾವು ರಾಜನೀತಿ ಮಾಡಲು ಬಂದಿಲ್ಲ. ರಾಷ್ಟ್ರನೀತಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಕಾರ್ಯಕರ್ತರು ವರ್ಷದ ಪ್ರತಿ ದಿನ 24 ಗಂಟೆ ದೇಶಕ್ಕಾಗಿ ಏನಾದ್ರು ಯೋಚನೆ ಮಾಡುತ್ತಿರುತ್ತಾರೆ. ಹೊಸ ಉತ್ಸಾಹ, ಹುಮ್ಮಿಸಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. 18 ನೇ ಲೋಕಸಭೆ ಚುನಾವಣೆಗೂ ಕೆಲಸ ಆರಂಭಿಸಿದ್ದಾರೆ. ಮುಂದಿನ 100 ದಿನ ಎಚ್ಚರಿಕೆಯಿಂದ ಇರಬೇಕು. ದೇಶದ ಪ್ರತಿ ಜನರನ್ನು ನಾವು ತಲುಪಬೇಕು. ಎಲ್ಲರ ವಿಶ್ವಾಸ ಸಂಪಾದಿಸಬೇಕು.
ಎಲ್ಲರ ವಿಶ್ವಾಸ ದೇಶದ ಸೇವೆಗಾಗಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಗಳಿಸಲಿದೆ. ಕಳೆದ ಎರಡು ದಿನದಲ್ಲಿ ನಡೆದ ಚರ್ಚೆ ದೇಶದ ಭವಿಷ್ಯ ಉಜ್ವಲಗೊಳಿಸಲಿದೆ. ಮುಂದಿನ 100 ದಿನಗಳಲ್ಲಿ, ನಾವೆಲ್ಲರೂ ಪ್ರತಿ ಹೊಸ ಮತದಾರರನ್ನು, ಪ್ರತಿಯೊಬ್ಬ ಫಲಾನುಭವಿಯನ್ನು, ಪ್ರತಿ ಸಮುದಾಯವನ್ನು ತಲುಪಬೇಕು. ನಾವು ಎಲ್ಲರ ವಿಶ್ವಾಸವನ್ನು ಗೆಲ್ಲಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.