ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್, ಜಪ್ತಿಯಾದ ಜಯಲಲಿತಾ ಒಡವೆಯನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲು ಸೂಚನೆ ನೀಡಿದೆ.
ಮಾರ್ಚ್ 6 ಮತ್ತು 7 ರಂದು ಒಡವೆಯನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ನ್ಯಾ. ಮೋಹನ್ ಸೂಚಿಸಿದ್ದಾರೆ
ಒಡವೆ ಸ್ವೀಕರಿಸಲು ತಮಿಳುನಾಡಿನಿಂದ ಇಬ್ಬರು ಅಧಿಕಾರಿಗಳ ನೇಮಕವಾಗಬೇಕು. ತಮಿಳುನಾಡು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಐಜಿಪಿ ವಿಜಿಲೆನ್ಸ್ ಹಾಜರಿರಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಕರ್ನಾಟಕಕ್ಕೆ ಕೊಡಬೇಕಾದ 5 ಕೋಟಿ ರೂ. ವ್ಯಾಜ್ಯ ಶುಲ್ಕ ಇನ್ನೂ ಪಾವತಿಯಾಗಿಲ್ಲ ಎಂದು ಕೋರ್ಟ್ಗೆ ಎಸ್ಪಿಪಿ ಕಿರಣ್ ಜವಳಿ ಮಾಹಿತಿ ನೀಡಿದರು. ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಮಾ.6 ಕ್ಕೆ ನಿಗದಿಪಡಿಸಿದೆ.