ರಾಮ ಮಂದಿರ (Ram Mandir) ಲೋಕಾರ್ಪಣೆಯಾದ ಬಳಿಕ ಬೆಂಗಳೂರು (Bengaluru) ಮತ್ತು ಅಯೋಧ್ಯೆ (Ayodhya) ನಡುವಿನ ವಿಮಾನ ಪ್ರಯಾಣದ (Flight Travel) ಬೇಡಿಕೆ ಹೆಚ್ಚಾಗುತ್ತಿದೆ.
ಕಳೆದ ನಾಲ್ಕು ವಾರಗಳಿಂದ ಎರಡು ನಗರಗಳ ನಡುವೆ ಸಂಚರಿಸುವ ವಿಮಾನದಲ್ಲಿ ಆಸನಗಳು ಬಹುತೇಕ ಭರ್ತಿಯಾಗುತ್ತಿದ್ದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಟೆಂಪಲ್ ಟೂರಿಸಂಗೆ (Temple Tourism) ಭರ್ಜರಿ ಸ್ಪಂದನೆ ಸಿಕ್ಕಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಸ್ಪೈಸ್ಜೆಟ್ ಈ ಮಾರ್ಗದಲ್ಲಿ ಪ್ರತಿದಿನ ವಿಮಾನ ಸೇವೆ ನೀಡುತ್ತಿವೆ. ಕಡಿಮೆ ಸೀಟ್ ಬುಕ್ ಆಗಿದೆ ಎಂಬ ಕಾರಣ ನೀಡಿ ಇಲ್ಲಿಯವರೆಗೆ ಒಂದು ದಿನವೂ ವಿಮಾನದ ಸೇವೆಯನ್ನು ರದ್ದು ಮಾಡಿಲ್ಲ ಎಂದು ಈ ಕಂಪನಿಗಳು ಮಾಧ್ಯಮಕ್ಕೆ ತಿಳಿಸಿವೆ.