ನಮ್ಮ ಮೆಟ್ರೋ ಯೆಲ್ಲೋ ಮಾರ್ಗದ (Namma Metro Yellow Line) ಮೊದಲ ಡ್ರೈವರ್ ಲೆಸ್ ಮೆಟ್ರೋದ ಮೊದಲ ಫೋಟೋ ರಿವೀಲ್ ಆಗಿದೆ.
ಹೆಬ್ಬಗೋಡಿ ಡಿಪೋದಲ್ಲಿರುವ ಮೆಟ್ರೋದ ಮೊದಲ ಫೋಟೋವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ದ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಚೀನಾ ತಯಾರಿಸಿರುವ ಈ ಮೆಟ್ರೋದ ಬೋಗಿಗಳನ್ನು ಫೆಬ್ರವರಿ 6 ರಂದು ಸಮುದ್ರ ಮಾರ್ಗವಾಗಿ ಚೆನ್ನೈಗೆ ಬಂದರು ಮೂಲಕ ಲಾರಿಗಳಲ್ಲಿ ಬೆಂಗಳೂರಿಗೆ ತರಲಾಗಿತ್ತು. ಸದ್ಯ ರಾಜ್ಯದ ಮೊದಲ ಡ್ರೈವರ್ ಲೆಸ್ ಮೆಟ್ರೋ ರೈಲು ಸಂಚಾರಕ್ಕೆ ಸಜ್ಜಾಗಿದೆ.
ಆರಂಭಿಕವಾಗಿ ಹಳದಿ ಮಾರ್ಗದಲ್ಲಿ ಪ್ರಾರಂಭ ಮಾಡಿ ನೀಲಿ ಮಾರ್ಗಕ್ಕೆ ವಿಸ್ತರಣೆ ಬಳಿಕ ನೇರಳೆ, ಹಸಿರು ಮಾರ್ಗಕ್ಕೂ ಈ ವ್ಯವಸ್ಥೆ ಅಳವಡಿಸಲು ಚಿಂತನೆಯನ್ನು BMRCL ಅಧಿಕಾರಿಗಳು ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.