ಅಕ್ಕಿ ತೊಳೆದ ನೀರು ನಿಷ್ಪ್ರಯೋಜಕ ಎಂದು ಕೆಲವರು ಭಾವಿಸುತ್ತಾರೆ. ಇದು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಪ್ರಯೋಜನಕಾರಿಯಾದ ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ.
೧) ಅಕ್ಕಿ ತೊಳೆದ ನೀರನ್ನು ಹತ್ತಿ ಅಥವಾ ಶುಭ್ರವಾದ ಬಟ್ಟೆಯಿಂದ ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗುತ್ತದೆ.
೨) ಮುಖ ಕೆಂಪಾಗುವುದು, ಚರ್ಮದ ಅಲರ್ಜಿಯಂತಹ ಸಮಸ್ಯೆಗಳಿದ್ದರೆ ಅಕ್ಕಿ ನೀರಿನಿಂದ ಮುಖ ತೊಳೆದರೆ ಫಲಿತಾಂಶ ಸಿಗುತ್ತದೆ
೩) ಅಕ್ಕಿ ತೊಳೆದ ನೀರನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ದಪ್ಪ ಹೆಚ್ಚುತ್ತದೆ.
೪) ಮಹಿಳೆಯರು ಬಿಳಿ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದರೆ ನಿತ್ಯವೂ ಈ ಅನ್ನದ ನೀರನ್ನು ಕುಡಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ.
೫) ಅಕ್ಕಿ ನೀರಿಗೆ ಉಪ್ಪು, ತುಪ್ಪ, ಕರಿಮೆಣಸು ಸೇರಿಸಿ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
೬) ಅಕ್ಕಿ ತೊಳೆದ ನೀರನ್ನು ಸೇವಿಸುವುದರಿಂದ ವಾಂತಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.