ಮನೆಗೆ ಕರೆಯದೇ ಬರುವ ಅತಿಥಿಗಳು ಎಂದರೆ ಜಿರಳೆ ಹಾಗೂ ಸೊಳ್ಳೆಗಳು! ಯಾಕೆಂದ್ರೆ ಇವುಗಳು ಮನೆಯೊಳಗೆ ಬರದೇ ಇರುವ ಹಾಗೆ, ಎಷ್ಟೇ ಜಾಗರೂಕತೆ ಮಾಡಿದರೂ, ಯಾವುದೇ ಕ್ರಮ ಕೈಗೊಂಡರೂ ಕೂಡ, ಮನೆಗೆ ಎಡೆ ಬಿಡದೇ ಆಗಮಿಸಿಬಿಡುತ್ತವೆ.
ಕೆಲವೊಮ್ಮೆ ಈ ಜಿರಳೆಗಳನ್ನು ಓಡಿಸಲು, ಅಂಗಡಿಯಿಂದ ಲಕ್ಷ್ಮಣ ರೇಖೆ, ಜಿರಳೆ ಸ್ಪ್ರೇ ಇತ್ಯಾದಿ ರಾಸಾಯನಿಕ ಅಂಶ ಗಳು ಇರುವ ಮದ್ದನ್ನು ತಂದು, ಮನೆಯಲ್ಲಿ ಎಲ್ಲಾ ಕಡೆ ಸ್ಪ್ರೇ ಮಾಡುತ್ತೇವೆ. ಆದರೆ ಆದರೆ ಮಕ್ಕಳಿರುವ ಮನೆಯಲ್ಲಿ ಹೀಗೆ ಮಾಡುವುದು ಸರಿಯಿಲ್ಲ. ಆದರೆ ಇರವುಗಳ ಕಾಟ ತಡೆಯಲು ಕೆಲವೊಂದು ಮನೆಮದ್ದುಗಳು ಸರಿಯಾಗಿ ಕೆಲಸ ಮಾಡಬಲ್ಲವು!
ಬೋರಿಕ್ ಆಸಿಡ್
ಜಿರಳೆಗಳನ್ನು ಕೆರಳಿಸಲು ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ. ಬೋರಿಕ್ ಆಸಿಡ್ ಅನ್ನು ಹೆಚ್ಚಿನ ದೈನಂದಿನ ಅಗತ್ಯ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಜಿರಳೆ ಸಂಪರ್ಕಕ್ಕೆ ಬರುವ ಮೂಲೆ ಮತ್ತು ಮೂಲೆಯಲ್ಲಿ ಸ್ವಲ್ಪ ಬೋರಿಕ್ ಆಮ್ಲದ ಪುಡಿಯನ್ನು ಹಾಕಿದರೆ ಸಾಕು.
ಬೇಕಿಂಗ್ ಸೋಡಾ
ಕೂಡ ಜಿರಳೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಸಕ್ಕರೆ ಮತ್ತು ಬೇಕಿಂಗ್ ಸೋಡಾಗಳ ಸಂಯೋಜನೆಯು ಜಿರಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಈ ಜಿರಳೆಗಳು ನಿಮ್ಮ ಮನೆಯಲ್ಲಿ ಹಾದು ಹೋಗುವ ಸ್ಥಳವನ್ನು ಕಂಡುಕೊಂಡು ಆ ಜಾಗದಲ್ಲಿ ಇದನ್ನು ಸಿಂಪಡಿಸಿ.
ಬೇವು
ಭಾರತದಲ್ಲಿ ವಿವಿಧ ಪ್ರದೇಶಗಳಿಗೆ ಬಳಸುವ ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ. ಬೇವು, ಪುಡಿಯಾಗಿ ಮತ್ತು ಎಣ್ಣೆಯಾಗಿ ದೊರೆಯುತ್ತದೆ. ಇವು ಜಿರಳೆಗಳನ್ನು ಕೊಲ್ಲಲು ಸಹಾಯ ಸಹಾಯ ಮಾಡುತ್ತದೆ. ಸಣ್ಣ ಪ್ರಮಾಣದ ಬೇವಿನ ಎಣ್ಣೆ ಮತ್ತು ನೀರನ್ನು ಮಿಶ್ರಣ ಮಾಡಬೇಕು ಮತ್ತು ಅದನ್ನು ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಬೇಕು, ಜಿರಳೆಗಳು ಓಡಾಡುವ ಜಾಗದಲ್ಲಿ ಸಿಂಪಡಿಸಬೇಕು.