ಕನ್ನಡದ ಗೂಗ್ಲಿ ಹುಡುಗಿ ನಟಿ ಕೃತಿ ಕರಬಂಧ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಪುಲ್ಕಿತ್ ಸಾಮ್ರಾಟ್ ಜೊತೆ ಹಸೆಮಣೆ ಏರಲು ಕೃತಿ ಸಜ್ಜಾಗಿದ್ದಾರೆ.
ತೆಲುಗಿನ ಬೋನಿ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕೃತಿ ಇದೇ ಮಾರ್ಚ್ 13ಕ್ಕೆ ದಾಂಪತ್ಯ ಜೀವನಕ್ಕೆ ಕೃತಿ ಕಾಲಿಡಲಿದ್ದಾರೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ನಟಿ ಕೃತಿ ಹಾಗೂ ಪುಲ್ಕಿತ್ ಗುಟ್ಟಾಗಿ ಎಂಗೇಜ್ಮೆಂಟ್ ಆಗಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಮದುವೆ ಬಗ್ಗೆ ನಟಿ ಅಧಿಕೃತ ಅಪ್ಡೇಟ್ ನೀಡಿದ್ದಾರೆ. ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಬಳಿಕ ಪುಲ್ಕಿತ್ ಪರಿಚಯವಾಗಿ ಆ ಬಳಿಕ ಪ್ರೀತಿಸಲು ಆರಂಭಿಸಿದ್ದಾರೆ. ಪುಲ್ಕಿತ್ ಜೊತೆ 5 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ಕೃತಿ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಇತ್ತೀಚೆಗೆ ಕೃತಿ ಅವರು ಪುಲ್ಕಿಟ್ ಸಾಮ್ರಾಟ್ ಜೊತೆ ಇರುವ ಫೋಟೋ ಹಂಚಿಕೊಂಡು, ‘ಕೈಜೋಡಿಸಿ ಒಟ್ಟಾಗಿ ಸಾಗೋಣ’ ಎಂದು ಬರೆದುಕೊಂಡಿದ್ದರು. ಅವರು ಬೇಕಂತಲೇ ‘ಮಾರ್ಚ್’ ಎಂಬ ಪದವನ್ನು ಬಳಸಿದ್ದರು. ಈಗಾಗಲೇ ಮದುವೆಗೆ ಸಕಲ ತಯಾರಿ ನಡೆಯುತ್ತಿದೆ. ಆದರೆ ಮದುವೆ ನಡೆಯುವ ಸ್ಥಳದ ಬಗ್ಗೆ ನಟಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.