ಬೆಂಗಳೂರು: ಕಳೆದೊಂದು ದಶಕದಿಂದ ನಡೆಯುತ್ತಿರುವ ಓಕಳಿಪುರ ಜಂಕ್ಷನ್ನ ಅಷ್ಟಪಥ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿ ಲೋಕಾರ್ಪಣೆ ಗೆ ಈಗ ಕಾಲ ಕೂಡಿ ಬಂದಿದೆ. ಮುಂದಿನ ವಾರ ಓಕಳೀಪುರ ಜಂಕ್ಷನ್ ನಲ್ಲಿ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಗಲಿದ್ದು, ಬರೋಬ್ಬರಿ 103 ಕೋಟಿ ವೆಚ್ಚದ ಬೆಂಗಳೂರಿನ ಪ್ರಪ್ರಥಮ ಸಿಗ್ನಲ್ ಫ್ರೀ ಕಾರಿಡಾರ್ ಅನಾವರಣಕ್ಕೆ ಸಿದ್ಧತೆ ಭರದಿಂದ ಸಾಗಿದೆ
ಬೆಂಗಳೂರಿನ ಪ್ರಥಮ ಸಿಗ್ನಲ್ ಫ್ರೀ ಕಾರಿಡಾರ್ ಉದ್ಘಾಟನೆಗೆ ಕೌಂಟ್ ಡೌನ್ 103 ಕೋಟಿಯಲ್ಲಿ ತಲೆಎತ್ತಿದ ಅಷ್ಟಪಥ ರಸ್ತೆ ಕಾರಿಡಾರ್ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಫ್ರೀ ಸಂಚಾರ ಕಲ್ಪಿಸೋ ಉದ್ದೇಶದಿಂದ ಆರಂಭಿಸಲಾಗಿದ್ದ ಕಾಮಗಾರಿ
ಓಕಳಿಪುರ ಜಂಕ್ಷನ್ನಲ್ಲಿ ಕಳೆದ 2013-14ರಲ್ಲಿ 103 ಕೋಟಿ ರೂ. ವೆಚ್ಚದಲ್ಲಿ ಎಂಟು ಲೈನ್ನ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನ ಬಿಬಿಎಂಪಿ ಆರಂಭಿಸಿತ್ತು.
ಸುಮಾರು 10 ವರ್ಷ ಕಾಮಗಾರಿ ಈಗ ಪೂರ್ಣಗೊಂಡಿದ್ದು, ಮುಂದಿನ ವಾರ ಲೋಕಾರ್ಪಣೆ ಗೆ ಸಿದ್ದತೆ ನಡೆದಿದೆ ಮಲ್ಲೇಶ್ವರ ಮತ್ತು ರಾಜಾಜಿನಗರ ಕಡೆಯಿಂದ ರೈಲ್ವೆ ನಿಲ್ದಾಣಕ್ಕೆ ಹಾಗೂ ಮೆಜೆಸ್ಟಿಕ್ನಿಂದ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 6,7 ಹಾಗೂ 8ಕ್ಕೆ ನೇರವಾಗಿ ಸಿಗ್ನಲ್ ಮುಕ್ತವಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು,ಇಡೀ ದೇಶದಲ್ಲೆ ಮೊದಲ ಬಾರಿಗೆ ಈ ವ್ಯವಸ್ಥೆಯನ್ನ ಪಾಲಿಕೆಯಿಂದ ಮಾಡಲಾಗಿದೆ.
ಸದ್ಯ ಕಾಮಗಾರಿ ಮುಗಿಯೋ ಹಂತ ತಲುಪಿದ್ದು, ಸುಣ್ಣ,ಬಣ್ಣ ಬಲಿಯೋ ಕೆಲಸ ಶುರುವಾಗಿದೆ, ಇನ್ನೊಂದು ವಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಈ ರಸ್ತೆಯನ್ನ ಉದ್ಘಾಟಿಸಲಿದ್ದು,ಈ ರಸ್ತೆಯಿಂದಾಗಿ ಗುಬ್ಬಿತೋಡದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್ ರಸ್ತೆಗಳು ಸಿಗ್ನಲ್ ಮುಕ್ತವಾಗಲಿದ್ದು, ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಟರ್ಮಿನಲ್ ಗಳಿಗೆ ನೇರವಾಗಿ ಸಂಪರ್ಕ ಸಿಗಲಿದೆ.
ನಾಲ್ಕು ಅಂಡರ್ ಪಾಸ್ ರಸ್ತೆ ಹಾಗೂ ರೈಲ್ವೇ ಮೇಲ್ಸೇತುವೆ ಸೇರಿ ಒಟ್ಟು 8 ಮಾರ್ಗಗಳಿಂದ ವಾಹನ ಸಂಚಾರಕ್ಕೆ ತಯಾರಿ ನಡೆದಿದ್ದು, ಸದ್ಯ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿದ್ದ ಈ ಭಾಗದ ವಾಹನ ಸವಾರರಿಗೆ ಇನ್ನಾದ್ರೂ ಟ್ರಾಫಿಕ್ ಸಮಸ್ಯೆ ತಪ್ಪಲಿದೆ