ದಯವಿಟ್ಟು ‘ನಮ್ಮನ್ನು ಉಳಿಸಿ, ನಮ್ಮ ಜೀವವು ಅಪಾಯದಲ್ಲಿದೆ. ನಾವು ವಂಚನೆಗೆ ಬಲಿಯಾಗಿದ್ದೇವೆ. ನಮ್ಮನ್ನು ರಷ್ಯಾದ ವ್ಯಾಗ್ನರ್ ಸೈನ್ಯಕ್ಕೆ ಸೇರಲು ಒತ್ತಾಯಿಸಲಾಗಿದೆ’ ಎಂದು ನಾಲ್ವರು ಭಾರತೀಯರು ತಮ್ಮ ಕುಟುಂಬ ಸದಸ್ಯರಿಗೆ ವಿಡಿಯೋ ಕಳುಹಿಸಿ ಮನವಿ ಮಾಡಿದ್ದಾರೆ.
ರಷ್ಯಾದ ಪೌರತ್ವ ಮತ್ತು ಉತ್ತಮ ಸಂಬಳ ನೀಡುವ ಆಮಿಷವೊಡ್ಡುವ ಮೂಲಕ ಉಕ್ರೇನ್ ವಿರುದ್ಧ ಯುದ್ಧಕ್ಕೆ ಒತ್ತಾಯಿಸಲಾಗಿದೆ. ಎಲ್ಲಾ ನಾಲ್ವರು ಯುವಕರು ರಷ್ಯಾ-ಉಕ್ರೇನ್ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ರಷ್ಯಾದಲ್ಲಿ ಸಿಲುಕಿರುವ ಯುವಕರಲ್ಲಿ ಒಬ್ಬರು ಮಾತ್ರ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ನಿವಾಸಿ 22 ವರ್ಷದ ಮೊಹಮ್ಮದ್ ಸೂಫಿಯಾನ್ ಆಗಿದ್ದು ಉಳಿದ ಮೂವರು ಕರ್ನಾಟಕದ ಕಲಬುರಗಿ ನಿವಾಸಿಗಳು ಎನ್ನಲಾಗಿದೆ. ಮೊಹಮ್ಮದ್ ತನ್ನೊಂದಿಗೆ ಇನ್ನೂ 3 ಮಂದಿ ಇದ್ದಾರೆ ಎಂದು ಕಳುಹಿಸಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
2023 ರ ಡಿಸೆಂಬರ್ನಲ್ಲಿ ಟ್ರಾವೆಲ್ ಏಜೆಂಟ್ಗಳು ಯುವಕರಿಗೆ ಸೈನ್ಯದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ಕೊಡಿಸುತ್ತೇವೆ ಎಂದು ಹೇಳಿ ರಷ್ಯಾಕ್ಕೆ ಕಳುಹಿಸಿದರು. ಇದೀಗ ಮೊಹಮ್ಮದ್ ಸೂಫಿಯಾನ್ ಅವರ ಸಹೋದರ 31 ವರ್ಷದ ಸೈಯದ್ ಸಲ್ಮಾನ್ ತನ್ನ ಸಹೋದರನ ಜೀವವನ್ನು ಉಳಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
15 ದಿನಗಳ ಹಿಂದೆ ಸೂಫಿಯಾನ್ ತನ್ನೊಂದಿಗೆ ಫೋನ್ನಲ್ಲಿ ಮಾತನಾಡಿದ್ದನ್ನು ಸೈಯದ್ ವ್ಲಾಗ್ ಮೂಲಕ ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ ಸೂಫಿಯಾನ್ ಉಕ್ರೇನ್ ಗಡಿಯಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿದ್ದರು. ಹಾಗೆಯೇ ಸೇನೆಯ ಸಮವಸ್ತ್ರ ಧರಿಸಿ ಶಸ್ತ್ರಾಸ್ತ್ರಗಳನ್ನು ನೀಡಿ ಬಲವಂತವಾಗಿ ಗಡಿಗೆ ಕಳುಹಿಸಲಾಗುತ್ತಿತ್ತು.
ಈ ವೇಳೆ ಯುವಕರ ಕೈಗೆ ಫೋನ್ ಕೈಗೆ ಸಿಕ್ಕಿದ್ದು, ಅದರ ಮೂಲಕ ಮನೆಯವರಿಗೆ ಸಂದೇಶ ಕಳುಹಿಸಿ ವಿಷಯ ತಿಳಿಸಿದ್ದಾರೆ. ಮೊಹಮ್ಮದ್ ಸೂಫಿಯಾನ್ ದುಬೈನಲ್ಲಿ ರಷ್ಯಾದ ಏಜೆಂಟರನ್ನು ಭೇಟಿಯಾದಾಗ ಅವರು ರಷ್ಯಾಕ್ಕೆ ಕಳುಹಿಸಲು ಮುಂದಾಗಿದ್ದರು ಎಂದು ಸೈಯದ್ ಹೇಳಿದ್ದಾರೆ. ಅಷ್ಟೇ ಅಲ್ಲ, ಅವರು ರಷ್ಯಾದ ಪೌರತ್ವ ಮತ್ತು ದೊಡ್ಡ ಸಂಬಳದ ಆಮಿಷ ಒಡ್ಡಿದರು.
ರಷ್ಯಾಕ್ಕೆ ಹೋಗುವ ಪ್ರಸ್ತಾಪವನ್ನು ಸ್ವೀಕರಿಸಿದ ನಂತರ ನವೆಂಬರ್ 2023 ರಲ್ಲಿ ದುಬೈನಿಂದ ಮರಳಿದರು. ಆ ನಂತರ ಏಜೆಂಟ್ ಡಿಸೆಂಬರ್ 2023 ರಲ್ಲಿ ರಷ್ಯಾಕ್ಕೆ ಕಳುಹಿಸಿದನು. ಚೆನ್ನೈನಿಂದ ವಿಮಾನದಲ್ಲಿ ಬಂದಿದ್ದ ಅವರಿಗೆ ಸಂದರ್ಶಕ ವೀಸಾ ಕಳುಹಿಸಲಾಗಿತ್ತು. ರಷ್ಯಾದಲ್ಲಿ ಅವರಿಗೆ ಕೆಲಸ ಕೊಡಿಸಲು ಏಜೆಂಟ್ 3.5 ಲಕ್ಷ ರೂಪಾಯಿ ತೆಗೆದುಕೊಂಡಿದ್ದರು. ಸೂಫಿಯಾನ್ ಜೊತೆ ಇತರ ಮೂವರು ಯುವಕರು ರಷ್ಯಾಕ್ಕೆ ಹೋಗಿದ್ದರು, ಆದರೆ ಅಲ್ಲಿಗೆ ಹೋದ ನಂತರ ಅವರನ್ನು ಭದ್ರತಾ ಸಿಬ್ಬಂದಿ ಕೆಲಸಕ್ಕೆ ಕಳುಹಿಸಲಾಯಿತು. ಉಕ್ರೇನ್ ವಿರುದ್ಧ ಯುದ್ಧ ಮಾಡಲು ಒತ್ತಾಯಿಸಲಾಯಿತು. ಪ್ರತಿಭಟನೆ ನಡೆಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು.
ರಷ್ಯಾದ ಭಾಷೆಯಲ್ಲಿ ಬರೆಯಲಾದ ದಾಖಲೆಗೆ ಸಹಿ ಹಾಕುವಂತೆ ಯುವಕರಿಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಅದರಲ್ಲಿ ಏನು ಬರೆಯಲಾಗಿದೆ ಎಂದು ತನಗೆ ತಿಳಿದಿಲ್ಲ ಎಂದು ಸೂಫಿಯಾನ್ ಹೇಳಿದರು. ಸುಮಾರು 60 ಭಾರತೀಯರಿಗೆ ವ್ಯಾಗ್ನರ್ ಸೈನ್ಯವನ್ನು ಸೇರಲು ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.